ರಿಷಬ್ ಶೆಟ್ಟಿ ಸೆಂಚುರಿ ಮೇಲೆ ಸೆಂಚುರಿ ಬಾರಿಸ್ತಿದ್ದಾರೆ..!! ಯಾವ ವಿಚಾರದಲ್ಲಿ ಗೊತ್ತಾ..?

28 Dec 2018 10:46 AM | Entertainment
519 Report

ಚಂದನವನದಲ್ಲಿ ಒಳ್ಳೆ ಬ್ರೇಕ್ ಕೊಟ್ಟ ಸಿನಿಮಾಗಳಲ್ಲಿ ಕಿರಿಕ್ ಪಾರ್ಟಿ ಕೂಡ ಒಂದು.. ನಿರ್ದೇಶಕ ರಿಷಬ್ ಶೆಟ್ಟಿ ಈ ಸಿನಿಮಾವನ್ನು ಬಹಳ ಅಚ್ಚು ಕಟ್ಟಾಗಿ ನಿರ್ದೇಶನ ಮಾಡಿದ್ದರು. ಇದೀಗ ಬೆಲ್ ಬಾಟಂ ಚಿತ್ರದ ಗದ್ದಲದ ನಡುವೆಯೂ ನಿರ್ದೇಶಕ, ನಟ, ರಿಷಬ್ ಶೆಟ್ಟಿ ನಾನು ಸೆಂಚುರಿ ಮಾಡಿದೆ ಎಂಬ ಸಂಭ್ರಮದಲ್ಲಿದ್ದಾರೆ. ಕಿರಿಕ್ ಪಾರ್ಟಿ, ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು ಮುಂತಾದ ಹಿಟ್ ಚಿತ್ರಗಳ ನಿರ್ದೇಶಕ ಇದೀಗ ಟ್ವಿಟರ್ ನಲ್ಲಿ ಶತಕ ದಾಖಲಿಸಿದ ಖುಷಿಯಲ್ಲಿದ್ದಾರೆ..

ರಿಷಬ್ ಟ್ವಿಟರ್ ಫಾಲೋವರ್ ಗಳ ಸಂಖ್ಯೆ 100 ಕೆ. ಗಡಿ ದಾಟಿರೋದು ಈ ಸಂಭ್ರಮಕ್ಕೆ ಕಾರಣವಾಗಿದೆ. ಕನ್ನಡ ಚಿತ್ರರಂಗದಲ್ಲಿ ಒಂದು ಲಕ್ಷ ಫಾಲೋವರ್ ಗಳನ್ನು ದಾಟಿದ ಕೆಲವೇ ಕೆಲವು ಟ್ವಿಟರಿಗರ ಸಾಲಿಗೆ ಇದೀಗ ರಿಷಬ್ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. 'ಕಿರಿಕ್ ಪಾರ್ಟಿ ಸೆಂಚುರಿ ಹೊಡೀತು, ಸ.ಹಿ.ಪ್ರಾ.ಶಾ. ಕಾಸರಗೋಡು ಸೆಂಚುರಿ ಹೊಡೀತು. ಈಗ ನಿಮ್ಮೆಲ್ಲರ ಪ್ರೀತಿಯಿಂದ ಟ್ವಿಟರ್ ನಲ್ಲಿ ಸೆಂಚುರಿ ಹೊಡೆದಿದ್ದೀನಿ. ಸೆಂಚುರಿ ಎಷ್ಟೇ ಆದರೂ ಎಲ್ಲಾ ಕ್ರೆಡಿಟ್ ನಿಮಗೇ ಅರ್ಪಣೆ. ಧನ್ಯವಾದ' ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.. ಇದೀಗ ಬೆಲ್ ಬಾಟಂ ಸಿನಿಮಾದಲ್ಲಿ ರಿಷಬ್ ಬ್ಯುಸಿಯಾಗಿದ್ದಾರೆ.

Edited By

Manjula M

Reported By

Manjula M

Comments