ಅಂದು ಶೋ ಮ್ಯಾನ್ ಎಂದಿದ್ದ ಯಶ್ ಗೆ.. ಇಂದು ಫಿದಾ ಆದ್ರಾ ಕರ್ನಾಟಕದ ಕ್ರಶ್…!
ಸ್ಯಾಂಡಲ್’ವುಡ್ ನಲ್ಲಿ ವರ್ಷಗಳಿಂದ ಹುಟ್ಟಿಸಿದ ನಿರೀಕ್ಷೆಗೆ ಇಂದು ತೆರೆ ಬಿದ್ದಿದೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಕೊನೆಗೂ ತೆರೆ ಬಿದ್ದಿದ್ದು ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ವಿಶ್ವದಾದ್ಯಂತ 2000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ದಿನದಿಂದ ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡಿದೆ.
ಕೆಜಿಎಫ್ ಸಿನಿಮಾ ನೋಡಿದ ಅಭಿಮಾನಿಗಳು, ಸಿನಿತಾರೆಯರು ಸಿನಿಮಾ ಬಗ್ಗೆ, ಯಶ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಈಗ ಕಿರಿಕ್ ಪಾರ್ಟಿ ಸಿನಿಮಾದ ಬೆಡಗಿ ರಶ್ಮಿಕಾ ಮಂದಣ್ಣ ಕೆಜಿಎಫ್ ಸಿನಿಮಾಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಸಿನಿಮಾ ನೋಡಿದ ಬೆಡಗಿ ಫುಲ್ ಫಿದಾ ಆಗಿದ್ದಾರೆ . ಸಿನಿಮಾ ನೋಡಿದ ಬೆಡಗಿ ರಶ್ಮಿಕಾ ಮಂದಣ್ಣ ' ನಾನು ಕೆಜಿಎಫ್ ಸಿನಿಮಾ ನೋಡುವಾಗ ಸೀಟ್ ನಿಂದ ಜಂಪ್ ಮಾಡಬೇಕು ಎಂದೆನಿಸಿತ್ತು. ಅಷ್ಟು ಅದ್ಬುತವಾಗಿ ದೃಶ್ಯಗಳು ಮೂಡಿ ಬಂದಿದೆ' ಎಂದಿದ್ದಾರೆ. 'ಈ ಸಿನಿಮಾ ನೋಡಿ ನನಗೆ ತುಂಬಾನೆ ಹೆಮ್ಮೆ ಆಗುತ್ತಿದೆ. ಇಂತಹ ಸಿನಿಮ ಕೊಟ್ಟ ಹೊಂಬಾಳೆ ಬ್ಯಾನರ್ ಗೂ ಧನ್ಯವಾದಗಳು' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
Comments