ಐತಿಹಾಸಿಕ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರ ನಟಿ ಹರಿಪ್ರಿಯಾ..? ಯಾವ ಪಾತ್ರದಲ್ಲಿ ಗೊತ್ತಾ..?

ಸ್ಯಾಂಡಲ್ ವುಡ್ ನ ಸಕ್ಸಸ್’ಪುಲ್ ನಿರ್ದೇಶಕರಲ್ಲಿ ಹರಿ ಸಂತೋಷ್ ಕೂಡ ಒಬ್ಬರು…ವಿಕ್ಟರಿ 2 ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಹರಿ ಸಂತೋಷ್ ಐತಿಹಾಸಿಕ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿ ಹರಿಪ್ರಿಯಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.. ಬಿಎಲ್ ವೇಣು ಅವರ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಕಾದಂಬರಿ ಆಧಾರಿತ ಚಿತ್ರವನ್ನು ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದು ಚಿತ್ರಕ್ಕೆ ಬಿಚ್ಚುಗತ್ತಿ ಎಂಬ ಟೈಟಲ್ ಇಡಲಾಗಿದೆ. ಚಿತ್ರದ ಮೊದಲ ಭಾಗವಾದ ದಳವಾಯಿ ದಂಗೆಯಲ್ಲಿ ಹರಿಪ್ರಿಯಾ ನಟಿಸುವ ಸಾಧ್ಯತೆ ಇದೆ ಎಂದಯ ಹೇಳಲಾಗುತ್ತಿದೆ.
ಈ ಸಿನಿಮಾದಲ್ಲಿ ರಾಜಾವರ್ಧನ ನಾಯಕನಾಗಿ ಅಭಿನಯಿಸುತ್ತಿದ್ದು ಚಿತ್ರದ ನಾಯಕಿ ಪಾತ್ರದ ಅನ್ವೇಷಣೆಯಲ್ಲಿದ್ದ ನಿರ್ದೇಶಕರ ಕಣ್ಣಿಗೆ ನೀರ್ ದೋಸೆ ಬೆಡಗಿ ಹರಿಪ್ರಿಯಾ ಬಿದ್ದಿದ್ದಾರೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದರಿಂದ ಈ ಪಾತ್ರಕ್ಕೆ ಹರಿಪ್ರಿಯಾ ಸೂಕ್ತ ಎಂದು ನಿರ್ದೇಶಕರು ಹರಿಪ್ರಿಯಾ ಜತೆ ಮಾತುಕತೆ ನಡೆಸಿದ್ದಾರೆ. ಚಿತ್ರದ ಪಾತ್ರದ ಕುರಿತಂತೆ ಹರಿಪ್ರಿಯಾ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಐತಿಹಾಸಿಕ ಸಿನಿಮಾಗಳು ತೆರೆ ಮೇಲೆ ಬರಲು ಸಜ್ಜಾಗುತ್ತಿವೆ. ಅಷ್ಟೆ ಅಲ್ಲದೆ ಹರಿಪ್ರಿಯಾಗೆ ಈ ಸಿನಿಮಾ ಒಂದೊಳ್ಳೆ ಬ್ರೇಕ್ ತಂದು ಕೊಡುವಲ್ಲಿ ನೋ ಡೌಟ್..
Comments