ಅಬ್ಬಬ್ಬಾ…! 5 ದಿನದಲ್ಲಿ 'ಕೆಜಿಎಫ್' ಕಲೆಕ್ಷನ್ ಎಷ್ಟು ಗೊತ್ತಾ.?

ಚಂದನವನದಲ್ಲಿ ಬಹು ನಿರೀಕ್ಷಿತವಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಕನ್ನಡ, ಹಿಂದಿ,ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾದ 'ಕೆಜಿಎಫ್' 5 ದಿನದಲ್ಲಿ ಸುಮಾರು 75 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸದ್ಯಕ್ಕೆ ಇದ್ದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಸ್ಯಾಂಡಲ್ ವುಡ್ ನಲ್ಲಿ ಈ ರೀತಿಯ ಸಿನಿಮಾವನ್ನು ಮಾಡಬಹುದು ಎಂದು ಪ್ರಶಾಂತ್ ನೀಲ್ ತೋರಿಸಿಕೊಟ್ಟಿದ್ದಾರೆ.
ಚಿತ್ರ ಪ್ರದರ್ಶನದ ಸ್ಕ್ರೀನ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ತಮಿಳುನಾಡಿನಲ್ಲಿ 'ಕೆಜಿಎಫ್' ಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಮುಂಬೈ, ಹೈದರಾಬಾದ್, ಚೆನ್ನೈ ಗಳಲ್ಲಿ 'ಕೆಜಿಎಫ್' ಧೂಳ್ ಎಬ್ಬಿಸಿದ್ದು, ಕರ್ನಾಟಕದಲ್ಲಿಯೂ ಕೂಡ ಕಮಾಲ್ ಮಾಡಿದೆ. ಚಿತ್ರ ಬಿಡುಗಡೆಯಾದ ದಿನದಿಂದಲೂ ಕೂಡ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದ್ದು, ಯಶ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಚಿತ್ರತಂಡ ಕೂಡ ತುಂಬಾ ಸಂಭ್ರಮದಲ್ಲಿದೆ. 'ಕೆಜಿಎಫ್' ಎಲ್ಲೆಡೆ ಮೋಡಿ ಮಾಡುತ್ತಿದೆ ಪ್ರೇಕ್ಷಕರು ಮತ್ತೆ ಮತ್ತೆ ಸಿನಿಮಾವನ್ನು ನೋಡಿದ್ದಾರೆ...ಒಟ್ಟಾರೆಯಾಗಿ ಸ್ಯಾಂಡಲ್ ವುಡ್ ಒಂದೊಳ್ಳೆ ಸಿನಿಮಾಗೆ ಸಾಕ್ಷಿಯಾಗಿದೆ.
Comments