‘ಕರಿಚಿರತೆ’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಹೊಸ ಚಿತ್ರದ ಟೈಟಲ್ ಅನೌನ್ಸ್..!

26 Dec 2018 9:38 AM | Entertainment
252 Report

ಸ್ಯಾಂಡಲ್ ವುಡ್ ನಲ್ಲಿ ಬ್ಲಾಕ್ ಕೋಬ್ರಾ ಅಂದ್ರೆ ನೆನಪಾಗೋದು ದುನಿಯಾ ವಿಜಯ್.. ಹೌದು… ದುನಿಯಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಎಂಟ್ರಿ ಕೊಟ್ಟ ವಿಜಿ ಚಂದನವನದ  ಭರವಸೆಯ ನಾಯಕನಾದರು. ಅವರದೆ ಆದ ಅಭಿಮಾನಿಗಳನ್ನು ಸಂಪಾದಿಸಿದರು.  ದುನಿಯಾ, ಚಂಡ, ಕರಿಚಿರತೆ ಅಂತಹ ಇನ್ನೂ ಅನೇಕ  ಸಿನಿಮಾಗಳನ್ನು ಕೊಟ್ಟರು..ಸಾಕಷ್ಟು ಹೆಸರನ್ನು ಕೂಡ ಮಾಡಿದರು. ಆದರೆ ಇತ್ತಿಚಿಗೆ ಅವರು ಫ್ಯಾಮಿಲಿ ಪ್ರಾಬ್ಲಂಗಳನ್ನು ಎದುರಿಸಬೇಕಾಯಿತು. ಹಾಗಾಗಿ ಸಿನಿಮಾಗೆ ಬ್ರೇಕ್ ಕೊಟ್ಟಿದ್ದರು. ಆದರೆ ಇದೀಗ ದುನಿಯಾ ವಿಜಿ ಅವರ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. 

ಸ್ಯಾಂಡಲ್ ವುಡ್ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಟೈಟಲ್ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ದುನಿಯಾ ವಿಜಯ್ ಅವರು `ಸಲಗ' ಎಂಬ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ರಾಘು ಶಿವಮೊಗ್ಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ರಾಘು ಶಿವಮೊಗ್ಗ ಅವರು ಚೂರಿ ಕಟ್ಟೆ ಸಿನಿಮಾ ನಿರ್ದೇಶನ ಮಾಡಿದ್ದರು. ಇದೀಗ ದುನಿಯಾ ವಿಜಿ ಜೊತೆ ಸಲಗ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಲಗ ಚಿತ್ರಕ್ಕೆ ಶಾಂತಿ ಸಾಗರ್, ಹೆಚ್.ಜಿ. ಛಾಯಾಗ್ರಹಣ, ನವೀನ್ ಸಜ್ಜು ಸಂಗೀತ, ಪ್ರಕಾಶ್ ಕರಿಂಜಾ ಮೋಹನ್ ಸಂಕಲನ ಮಾಡುತ್ತಿದ್ದಾರೆ. ಜನವರಿ 1, 2019 ರಂದು ಚಿತ್ರದ ಪೋಸ್ಟರ್ ರಿಲೀಸ್ ಆಗಲಿದೆ ಎಂದು ದುನಿಯಾ ವಿಜಯ್ ತಿಳಿಸಿದ್ದಾರೆ. ಅಭಿಮಾನಿಗಳು ಇದರಿಂದ ಖುಷಿಯಾಗಿದ್ದಾರೆ.

Edited By

Manjula M

Reported By

Manjula M

Comments