'ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ ': ಚಳಿಗಾಲಕ್ಕೆ ಬೆಚ್ಚನೆಯ ಗಿಫ್ಟ್ ಕೊಟ್ರು.. ಭಟ್ರು..!!

ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ಅಂದರೆ ಅದರಲ್ಲಿ ವಿಭಿನ್ನ ಕಥೆಯಿರುತ್ತದೆ. ಅದೇ ರೀತಿ 'ಮುಗುಳುನಗೆ' ಸಿನಿಮಾದ ನಂತರ ನಿರ್ದೇಶಕ ಯೋಗರಾಜ್ ಭಟ್ ರ ಹೊಸ ಸಿನಿಮಾ 'ಪಂಚತಂತ್ರ' ಚಿತ್ರವನ್ನು ನಿರ್ದೇಶನವನ್ನು ಮಾಡಿದ್ದಾರೆ. ಇದೀಗ ಈ ಸಿನಿಮಾದ ರೊಮ್ಯಾಂಟಿಕ್ ಸ್ಟಿಲ್ಸ್ ಗಳು, ಟೀಸರ್ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಸದ್ಯ ಸಿನಿಮಾದ ಒಂದು ಸಾಂಗ್ ಬಿಡುಗಡೆಯಾಗಿದೆ.ಸಿನಿ ರಸಿಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ಪಂಚತಂತ್ರ ಸಿನಿಮಾದ 'ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..' ಎಂಬ ಹಾಡು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಇಂದು ಬಿಡುಗಡೆಯಾಗಿದೆ. ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದು, ಹರಿಕೃಷ್ಣ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್ ಈ ಹಾಡನ್ನು ಬರೆದಿದ್ದಾರೆ. ಇನ್ನೂ, ಈ ಸಿನಿಮಾವನ್ನು ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ನಿರ್ಮಿಸಿದ್ದಾರೆ. . ವಿಹಾನ್ ಗೌಡ ಈ ಚಿತ್ರದ ನಾಯಕನಾಗಿದ್ದು, ನಾಯಕಿಯಾಗಿ ಸೋನಲ್ ಮಾಂತೆರೋ ಹಾಗೂ ಅಕ್ಷರ ಗೌಡ ನಟಿಸುತ್ತಿದ್ದಾರೆ. ಹಾಡೇ ಈ ಸಿನಿಮಾದ ಹೈಲೆಟ್ ಆಗಿದ್ದು, ಹಾಡು ತುಂಬಾ ಚೆನ್ನಾಗಿದೆ.
Comments