ಚಾಲೆಂಜಿಂಗ್ ಸ್ಟಾರ್ ದರ್ಶನ್ 53ನೇ ಚಿತ್ರಕ್ಕೆ ಟೈಟಲ್ ಫಿಕ್ಸ್..!!
ಸ್ಯಾಂಡಲ್ ವುಡ್ ಒಳ್ಳೆ ಸಿನಿಮಾ ಟ್ರೆಂಡ್ ಕ್ರಿಯೆಟ್ ಆಗಿದೆ ಅನಿಸುತ್ತಿದೆ. ಒಳ್ಳೆಯ ಸಿನಿಮಾಗಳು ತೆರೆ ಮೇಲೆ ಬರುತ್ತಿವೆ.. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ 53ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದ್ದು, ಅಭಿಮಾನಿಗಳ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದಂತಾಗಿದೆ. ಈ ಕುರಿತು ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಎಸ್.. ಇಂದು ಕ್ರಿಸ್ಮಸ್ ಶುಭಾಷಯ ಕೋರುತ್ತಾ 53 ನೇ ಚಿತ್ರದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ # 53 ಚಿತ್ರಕ್ಕೆ 'ರಾಬರ್ಟ್' ಎಂಬ ಶೀರ್ಷಿಕೆ ಫೈನಲ್ ಗೊಳಿಸಲಾಗಿದೆ. ಉಮಾಪತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ, ತರುಣ್ ಕಿಶೋರ್ ಸುಧೀರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹೊಸ ವರ್ಷದಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ . ಎಲ್ಲಾ ಕ್ರೈಸ್ತ ಭಾಂದವರಿಗೂ ಕ್ರಿಸ್ಮಸ್ ಹಬ್ಬದ ಹಾರ್ಧಿಕ ಶುಭಾಷಯಗಳು. ' ಎಂದು ಟ್ವೀಟ್ ಮಾಡಿರುವ ದರ್ಶನ್ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ ಚಿತ್ರಕ್ಕೆ ರೆಡಿಯಾಗಿದ್ದಾರೆ. ಈ ಹಿಂದೆ ಕೇಳಿಬರುತ್ತಿದ್ದ ಸುದ್ದಿಯಂತೆ ದರ್ಶನ್ 53ನೇ ಚಿತ್ರಕ್ಕೆ 'ರಾಬರ್ಟ್' ಎಂದು ಹೆಸರಿಡಲಾಗಿದೆ. ಸದ್ಯ, ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ಹನುಮಂತನ ಹೆಗಲ ಮೇಲೆ ರಾಮ ಕೂತು, ಬಾಣ ಬಿಡುತ್ತಿರುವ ಫೋಟೋ ಈಗ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.
Comments