ಕೆಜಿಎಫ್ ಗಿಂತಲೂ ದೊಡ್ಡ ಸಂತೋಷ ಯಶ್’ಗೆ ಬೇರೆನೇ ಇದೆಯಂತೆ..!!

ಸ್ಯಾಂಡಲ್ ವುಡ್ ನಲ್ಲಿ ಅಷ್ಟೆ ಅಲ್ಲದೆ ಇಡೀ ದಕ್ಷಿಣ ಭಾರತದಲ್ಲೆ ಕೆಜಿಎಫ್ ಸಿನಿಮಾ ಸಿಕ್ಕಾಪಟ್ಟೆ ಧೂಳ್ ಎಬ್ಬಿಸಿದೆ. ಈ ರೀತಿಯ ಚಿತ್ರವನ್ನು ಸ್ಯಾಂಡಲ್ ವುಡ್ ನಲ್ಲಿ ಮಾಡಬಹುದಾ ಎಂದು ಅಚ್ಚರಿ ಪಡುತ್ತಿದ್ದಾರೆ. ಎರಡು ವರ್ಷಗಳ ಸತತ ಪ್ರಯತ್ನಗೆ ಇದೀಗ ಫಲ ಸಿಕ್ಕಿದೆ. ಸ್ಯಾಂಡಲ್ ವುಡ್ ನ ಎಲ್ಲಾ ಹೀರೋ ಹೀರೋಹಿನ್ ಗಳು ಚಿತ್ರಕ್ಕೆ ಶುಭಾಷಯವನ್ನು ತಿಳಿಸುತ್ತಿದ್ದಾರೆ. ಆದರೆ ಕೆಜಿಎಫ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಯಶ್ ಗೆ ಈಗ ಅದಕ್ಕಿಂತ ದೊಡ್ಡ ಖುಷಿಯೊಂದು ಮನೆಯಲ್ಲೇ ಸಿಗುತ್ತಿದೆಯಂತೆ.
ಅದೇ ಕಾರಣಕ್ಕೆ ಯಶ್ ಮನೆಗೆ ಬೇಗ ಹೋಗುತ್ತಾರಂತೆ. ರಾಕಿಂಗ್ ಸ್ಟಾರ್ ಹೇಳಿರೋದು ತಮ್ಮ ಮುದ್ದಿನ ಮಗಳ ಬಗ್ಗೆ. ಹೌದು.. ಇದೇ ತಿಂಗಳು ಯಶ್-ರಾಧಿಕಾ ದಂಪತಿಗೆ ಹೆಣ್ಣು ಮಗುವಾಗಿತ್ತು. ಆ ಮುದ್ದು ಮಗಳೇ ನನ್ನ ಖುಷಿಗೆ ಕಾರಣ ಎಂದು ಯಶ್ ಅಮೆರಿಕಾ ಮೂಲದ ಯೂ ಟ್ಯೂಬ್ ಚಾನೆಲ್ ಒಂದರ ಸಂದರ್ಶಕರ ಬಳಿ ಹೇಳಿಕೊಂಡಿದ್ದಾರೆ. 'ಎಷ್ಟೇ ಕೆಲಸವಿದ್ದರೂ ಮನೆಗೆ ಹೋಗುವಾಗ ನನಗಾಗಿ ಒಬ್ಬ ಪುಟ್ಟ ದೇವತೆ ಕಾಯುತ್ತಿರುತ್ತಾಳೆ. ಅವಳ ಜೊತೆ ನಾನು ಆಟ ಆಡಬಹುದು ಎಂಬುದೇ ನನಗೆ ಅತ್ಯಂತ ಖುಷಿ ಕೊಡುವ ವಿಚಾರ. ಅವಳು ನಂಗೆ ಒಂಥರಾ ಅದೃಷ್ಟ ದೇವತೆ' ಎಂದು ಯಶ್ ತಿಳಿಸಿದ್ದಾರೆ. ಯಶಸ್ಸಿನ ಖುಷಿಯಲ್ಲಿರುವ ಯಶ್ ಮಗಳು ಸಾಥ್ ಕೊಟ್ಟಂತೆ ಆಗಿದೆ.
Comments