ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆ ಯಾವಾಗ ಗೊತ್ತಾ..?
ಸ್ಯಾಂಡಲ್ ವುಡ್ ನಲ್ಲಿ ಇತ್ತಿಚಿಗೆ ಬಾರಿ ಕೂತೂಹಲ ಕೆರಳಿಸಿದ ಚಿತ್ರ ಕೆಜಿಎಫ್ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಎಲ್ಲೆಡೆ ಪ್ರಶಂಸೆಯ ಸುರಿಮಳೆಯೇ ಸುರಿಯುತ್ತಿದೆ. ಇದೀಗ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿರುವ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ 3ಡಿ ವರ್ಸನ್ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಚಾಲೆಂಜಿಂಜ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ಪೌರಾಣಿಕ ಗೆಟಪ್ ನಲ್ಲಿ ಮಿಂಚಿರುವ ದರ್ಶನ್ ಮತ್ತೊಮ್ಮೆ ಅದೇ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಪೌರಾಣಿಕ ಸಿನಿಮಾವಾದ ಕುರುಕ್ಷೇತ್ರ ವನ್ನು ನಾಗಣ್ಣ ನಿರ್ದೇಶಿಸಿದ್ದಾರೆ.ಇದು ದರ್ಶನ್ 50ನೇ ಸಿನಿಮಾವಾಗಿದ್ದು ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಕುರುಕ್ಷೇತ್ರ ಸಿನಿಮಾ ತಂಡ ಮೆಗಾ ಆಡಿಯೋ ರಿಲೀಸ್ ಗೆ ಎಲ್ಲಾ ರೀರಿಯ ಸಿದ್ಧತೆ ನಡೆಸುತ್ತಿದೆ, ಜನವರಿ 27 ರಂದು ಆಡಿಯೋ ಬಿಡುಗಡೆಯಾಗುವ ಸಾಧ್ಯಕೆಯಿದೆ ಎನ್ನಲಾಗುತ್ತಿದೆ.ವಿ ಹರಿ ಕೃಷ್ಣ ಸಂಗಿತ ನಿರ್ದೇಶಿಸಿರುವ ಕುರುಕ್ಷೇತ್ರ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ದಾಖಲೆ ಬೆಲೆಗೆ ಖರೀದಿ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ಇದಾಗಿರುವುದರಿಂದ ಅವರ ಅಭಿಮಾನಿಗಳಲ್ಲಿ ಬಾರೀ ನಿರೀಕ್ಷೆ ಹಾಗೂ ಕುತೂಹಲ ಹುಟ್ಟಿಸಿದೆ.
Comments