ರಾಕಿ ಬಾಯ್….ಗೆ ಸುಮಲತಾ ಅಂಬರೀಶ್ ಏನ್ ಹೇಳುದ್ರು ಗೊತ್ತಾ..?

ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಸಿನಿಮಾ ಇಂದು ರೀತಿಯ ಟ್ರೆಂಡ್ ಕ್ರಿಯೆಟ್ ಮಾಡಿದೆ. ಎಲ್ಲೆಲ್ಲಿಯೂ ಕೆಜಿಎಫ್ ಹವಾ ಜೋರಾಗಿಯೇ ಇದೆ.. ಯಶ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸುಮಲತಾ ಅಂಬರೀಶ್ ಹೆಮ್ಮೆಯಿಂದಲೇ ಯಶ್ ಅವರ ಬೆನ್ನು ತಟ್ಟಿದ್ದಾರೆ. ಅಂಬರೀಶ್ ರನ್ನು ಅಪ್ಪಾಜಿಯಂತೇ ಕಾಣುತ್ತಿದ್ದ ಅವರು ತೀರಿಕೊಂಡಾಗ ಕುಟುಂಬದವರಂತೇ ಕೊನೆಯವರೆಗೂ ಕೂಡ ಜೊತೆಗೆ ಇದ್ದಾರೆ. ನಂತರ ಕೆಜಿಎಫ್ ಬಿಡುಗಡೆಯಾದ ದಿನವೂ ಯಶ್ ಅಂಬರೀಶ್ ರನ್ನು ನೆನೆದು ಮಿಸ್ ಯೂ ಅಣ್ಣಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ..
ಇದೀಗ ಈಗ ಕೆಜಿಎಫ್ ಬಿಡುಗಡೆಯಾಗಿ ಮೂರು ದಿನಗಳು ಕಳೆದಿದೆ. ರಾಕಿಂಗ್ ಸ್ಟಾರ್ ಗೆ ಸುಮಲತಾ ಅಭಿನಂದನೆಯನ್ನು ತಿಳಿಸಿದ್ದಾರೆ.. 'ಕೆಜಿಎಫ್ ಸಿನಿಮಾ ಪಕ್ಕಾ ಗೋಲ್ಡ್. ಕನ್ನಡದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಲಾದ ಸಿನಿಮಾ ಈ ಕೆಜಿಎಫ್. . ಯಶ್ ನಿಮ್ಮ ಸಾಹಸ, ಪರಿಶ್ರಮಕ್ಕೆ ಸಂದ ಫಲವಿದು. ಇಂತಹ ಸಿನಿಮಾ ಮತ್ತೆ ಮತ್ತೆ ಆಗಲ್ಲ. ರಾಕಿ ಬಾಯ್.. ನಿನ್ನ ಪರಿಶ್ರಮದ ಫಲವನ್ನು ಈಗ ಸುಮ್ಮನೇ ಕುಳಿತು ಅನುಭವಿಸುವ ಕಾಲವಿದು' ಎಂದು ಸುಮಲತಾ ಯಶ್ ಗೆ ಹೊಗಳಿ ಬರೆದಿದ್ದಾರೆ. ನಿಜಕ್ಕೂ ಸುಮಲತ ಹೇಳಿದ ಹಾಗೆ ಸಿನಿಮಾ ತುಂಬ ಅಧ್ಬುತವಾಗಿ ಮೂಡಿ ಬಂದಿದೆ. ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
Comments