ಕ್ಯೂರಾಸಿಟಿ ಕ್ರಿಯೆಟ್ ಮಾಡಿದ ಸುದೀಪ್-ಅನೂಪ್ ಭಂಡಾರಿಯ ಹೊಸ ಸಿನಿಮಾದ ಟೈಟಲ್

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾ ಹಂದರದ ಸಿನಿಮಾಗಳನ್ನು ಸಾಕಷ್ಟು ಬರುತ್ತಿವೆ.. ಕಿಚ್ಚ ಸುದೀಪ್ ಮತ್ತು ಪ್ರತಿಭಾವಂತ ಯುವ ನಿರ್ದೇಶಕರಾದ ಅನೂಪ್ ಭಂಡಾರಿ ಜೊತೆಯಾಗಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ ಎಂಬ ಸುದ್ದಿ ಓದಿರುತ್ತೀರಿ. ಇದೀಗ ಈ ಜೋಡಿಯ ಸಿನಿಮಾದ ಫಸ್ಟ್ ಲುಕ್ ನಿನ್ನೆ ಬಿಡುಗಡೆಯಾಗಿದ್ದು, ಟೈಟಲ್ ನೋಡಿ ಪ್ರೇಕ್ಷಕರ ತಲೆಯಲ್ಲಿ ಹಲವು ಗೊಂದಲಗಳು ಹುಟ್ಟಿಗೊಂಡಿವೆ...
ಗುರುವಾರ ಸಿನಿಮಾದ ಬಗ್ಗೆ ಡೀಟೈಲ್ ಕೊಡ್ತೀನಿ ಎಂದು ಟ್ವೀಟ್ ಮಾಡಿದ್ದ ಕಿಚ್ಚಸುದೀಪ್ ಇದೀಗ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರ ಟೈಟಲ್ 'ಬಿಲ್ಲಾ ರಂಗ ಭಾಷ' ಎಂದು. ಈ ಟೈಟಲ್ ನೋಡಿಯೇ ಅಭಿಮಾನಿಗಳು ಏನಿದು ಎಂದು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಟೈಟಲ್ಲೇ ಇಷ್ಟು ಇಂಟರೆಸ್ಟಿಂಗ್ ಆಗಿದೆ ಎಂದರೆ ಸಿನಿಮಾ ಯಾವ ರೀತಿ ಇರಬೇಕು ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಕಿಚ್ಚನಿಗೆ ಅಭಿಮಾನಿಗಳು ಶುಭವನ್ನು ಹಾರೈಸಿದ್ದಾರೆ. ಇದರಲ್ಲಿ ಕಿಚ್ಚ ತ್ರಿಬಲ್ ರೋಲ್ ಮಾಡ್ತಿದ್ದಾರಾ? ಮೂವರು ಲೀಡಿಂಗ್ ಕ್ಯಾರೆಕ್ಟರ್ ಗಳ ಹೆಸರಾ? ಇದರ ಅರ್ಥ ಏನು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದಕ್ಕೆಲ್ಲಾ ಚಿತ್ರತಂಡವೇ ಉತ್ತರ ಕೊಡಬೇಕಿದೆ..
Comments