ಅನುಷ್ಕಾ ಶೆಟ್ಟಿಯನ್ನು ಲವ್ ಮಾಡ್ತಿದ್ದಾರಾ ಬಾಹುಬಲಿ ನಾಯಕ ಪ್ರಭಾಸ್..!?

20 Dec 2018 12:32 PM | Entertainment
412 Report

ಅನುಷ್ಕಾ ಶೆಟ್ಟಿ, ಪ್ರಬಾಸ್ ಅವರನ್ನು ನೋಡೋ ಅಭಿಮಾನಿಗಳು ಇವರಿಬ್ಬರದು ಮೇಡ್ ಫಾರ್ ಈಚ್ ಅದರ್ ಅಂತಾರೆ.. ಆದರೆ ಇವರಿಬ್ಬರು ನಡುವೆ ಸ್ನೇಹ ಇದ್ಯೋ ಅಥವಾ ಪ್ರೀತಿ ಇದ್ಯೋ ಎಂಬ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ.. ಬಾಹುಬಲಿ ತಾರೆಯರಾದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಆಫ್ ಸ್ಕ್ರೀನ್ ನಲ್ಲೂ ಜೋಡಿಯಾಗಬೇಕೆಂಬುದು ಅವರ ಅಭಿಮಾನಿಗಳ ಬಯಕೆ. ಅಷ್ಟೇ ಏಕೆ ಈ ತಾರಾ ಜೋಡಿ ಇತ್ತಿಚೆಗೆ ಡೇಟಿಂಗ್  ಕೂಡ ಮಾಡ್ತಿದ್ದಾರಂತೆ.. ಮದುವೆ ಆಗ್ತಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿರುತ್ತವೆ.

ಕರಣ್ ಜೋಹರ್ ನಡೆಸಿಕೊಡುವ ಶೋನಲ್ಲಿ ಕರಣ್ ನೀವು ಯಾರನ್ನಾದರೂ ಡೇಟ್ ಮಾಡ್ತಿದ್ದೀರಾ ಎಂದಿದ್ದಕ್ಕೆ ಪ್ರಭಾಸ್ ಇಲ್ಲ ಎಂದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಕರಣ್ ನೀವು ಅನುಷ್ಕಾರನ್ನು ಲವ್ ಮಾಡ್ತಿದ್ದೀರಾ ಎಂದು ಕೂಡ ಕೇಳಿದ್ದಾರೆ. ಇದಕ್ಕೂ ಪ್ರಭಾಸ್ ಇಲ್ಲ, ಇಂತಹ ರೂಮರ್ಸ್ ಎಲ್ಲಾ ನೀವೇ ಹಬ್ಬಿಸಿದ್ದು ಎಂದಿದ್ದಾರೆ. ಆದರೆ ಶೋ ಕೊನೆಗೆ ಪ್ರಭಾಸ್ ಗೆ ಕರಣ್ ಈ ಶೋನಲ್ಲಿ ನೀವು ಏನಾದರೂ ಸುಳ್ಳು ಹೇಳಿದ್ದೀರಾ ಎಂದಿದ್ದಕ್ಕೆ ಪ್ರಭಾಸ್ 'ಹೌದು' ಎಂದಿದ್ದಾರೆ.ಹಾಗಾಗಿ ಈ 'ಸುಳ್ಳು' ತಮ್ಮ ರಿಲೇಷನ್ ಶಿಪ್ ಬಗ್ಗೆ ಹೇಳಿಕೊಂಡಿದ್ದಾರಾ ಎಂಬ ಮಾತುಗಳೂ ಕೇಳಿ ಬರುತ್ತಿವೆ.

Edited By

Manjula M

Reported By

Manjula M

Comments