ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ..! ಕುರುಕ್ಷೇತ್ರ ಸಿನಿಮಾ ಬಿಡುಗಡೆ ಯಾವಾಗ..?
ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆಯನ್ನು ಮೂಡಿಸಿರುವ ಹಾಗೆ ಸಖತ್ ಸೌಂಡ್ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕುರುಕ್ಷೇತ್ರ ಚಿತ್ರಕ್ಕೆ ಚಿತ್ರ ಮಂಡಳಿಯು ಯುಎ ಸರ್ಟಿಫಿಕೇಟ್ ಕೊಟ್ಟಿದೆ. ಕುರುಕ್ಷೇತ್ರದಲ್ಲಿ ಸ್ಯಾಂಡಲ್ ವುಡ್ ನ ಘಟನಾನುಘಟಿ ಕಲಾವಿದರು ನಟಿಸಿದ್ದು, ಸ್ಯಾಂಡಲ್ ವುಡ್ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲಿ ಸೌಂಡ್ ಮಾಡುತ್ತಿರುವ ಕುರುಕ್ಷೇತ್ರ ಚಿತ್ರದ ಸೆನ್ಸಾರ್ ಕಂಪ್ಲೀಟ್ ಆಗಿದೆ.
ಸಿನಿಮಾಗೆ ಯುಎ ಸರ್ಟಿಫಿಕೇಟ್ ಸಿಕ್ಕಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಮಿಂಚಲಿದ್ದಾರೆ.. ಇನ್ನೂ 3 ಡಿ ವರ್ಷನ್ ಸಿನಿಮಾ ಕೆಲಸ ಬಾಕಿ ಇದ್ದು, ಫೆಬ್ರವರಿಯಲ್ಲಿ ಆಡಿಯೋ ಲಾಂಚ್ ಮಾಡಲಿದೆ ಚಿತ್ರತಂಡ, ಏಪ್ರೀಲ್’ನಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ. ಇದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ.
Comments