ಸುದೀಪ್ ಫ್ಯಾಮಿಲಿಯಿಂದ ಮತ್ತೊಂದು ಪ್ರತಿಭೆ ಸ್ಯಾಂಡಲ್ ವುಡ್’ಗೆ ಎಂಟ್ರಿ..!!

ಸ್ಯಾಂಡಲ್ ವುಡ್ ಗೆ ಇತ್ತಿಚಿಗೆ ಹೊಸ ಹೊಸ ಪ್ರತಿಭೆಗಳು ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೆಸರು ಮಾಡುರುವ ಕಿಚ್ಚ ಸುದೀಪ್ ಸೋದರ ಸಂಬಂಧಿಯಾಗಿರುವ ಸಂಚಿತ್ ಸಂಜೀವ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಆದರೆ ಸಂಚಿತ್ ಗೆ ಚಿತ್ರರಂಗ ಹೊಸದೇನು ಅಲ್ಲ... ನಟನೆಗೆ ಮಾತ್ರ ಹೊಸಬರು ಅಷ್ಟೆ.. 7 ವರ್ಷಗಳ ಅನುಭವ, ವಾಣಿಜ್ಯ ಜಾಹೀರಾತು, ಕಿಚ್ಚ ಪ್ರೊಡಕ್ಷನ್ ನ ಹಲವು ಸಿನಿಮಾಗಳನ್ನು ಕೂಡ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸಂಚಿತ್ ಕ್ಯಾಮೆರಾ ಎದುರಿಸಲು ಇದೀಗ ಸಿದ್ಧರಾಗಿದ್ದಾರೆ. ನ್ಯೂಯಾರ್ಕ್ ನಲ್ಲಿ 2 ವರ್ಷಗಳ ಸಿನಿಮಾ ಕೋರ್ಸ್ ಮುಗಿಸಿರುವ, ಸಂಚಿತ್ ನಟನೆ,ಸಿನಿಮಾಟೋಗ್ರಫಿ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ.. ಮಾರ್ಚ್ 19 ರಂದು ಈ ಸಿನಿಮಾ ಸೆಟ್ಟೇರಲಿದೆ, ಜೂನ್ ತಿಂಗಳ ಅಂತ್ಯದಲ್ಲಿ ಸಿನಿಮಾ ತೆರೆಗೆ ಬರಲಿದೆ. .ಕ್ಯಾಮೆರಾ ಮುಂದೆ ಹೊಸದೊಂದು ಪ್ರಯತ್ನ ಮಾಡಲು ತಯಾರಿ ನಡೆಸಿರುವುದಾಗಿ ಸಂಚಿತ್ ತಿಳಿಸಿದ್ದಾರೆ. ಹೊಸ ಯುವಕರು ಬಣ್ಣದ ಲೋಕದಲ್ಲಿ ತನ್ನ ಬದುಕನ್ನು ಕಟ್ಟಿ ಕೊಳ್ಳುತ್ತಿದ್ದಾರೆ.
Comments