ನಾನು ‘ಪಾಕಿ’ಯಾಗಬೇಕಿತ್ತು ಎಂದ ಭಾರತದ ಸಿಂಗರ್
ಸ್ಯಾಂಡಲ್’ವುಡ್ ನಲ್ಲಿ ಹಾಡುಗಳನ್ನು ಹಾಡುವ ಮೂಲಕವೇ ಸಖತ್ ಸದ್ದು ಗಾಯಕ ಅಂದರೆ ಅದು ಸೋನು ನಿಗಮ್ ದೇಶದ ಪ್ರಸಿದ್ಧ ಗಾಯಕ ಸೋನು ನಿಗಮ್ ತಾವು ಪಾಕಿಸ್ತಾನಿಯಾಗಿರಬೇಕಿತ್ತು ಎನ್ನುವ ಹೇಳಿಕೆಯೊಂದನ್ನು ನೀಡಿದ್ದಾರೆ.
ಹಾಡುಗಾರ, ನಟನೂ ಆಗಿರುವಂತಹ ಸೋನು ನಿಗಮ್ ಗೆ ಅತ್ಯಂತ ಹೆಚ್ಚಿನ ಸಂಖ್ಯೆಯ ಫ್ಯಾನ್ಸ್ ಫಾಲೋಯರ್ಸ್ ಗಳಿದ್ದು, ಅನೇಕ ಭಾಷೆಗಳಲ್ಲಿ ಹಾಡುವ ಮೂಲಕ ಜನ ಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದಶರ್ನದಲ್ಲಿ ಸೋನು ನಿಗಮ್ ಪಾಕಿಸ್ತಾನಿಯಾಗಿದ್ದರೆ ಹೆಚ್ಚಿನ ಅವಕಾಶ ಸಿಗುತ್ತಿತ್ತು. ಆದ್ದರಿಂದ ತಾವು ಪಾಕಿಸ್ತಾನಿಯಾಗಿರಬೇಕಿತ್ತು ಎಂದು ಹೇಳಿರುವುದು ಸಾಕಷ್ಟು ಸುದ್ದಿಯಾಗಿದೆ. ಈ ಹೇಳಿಕೆ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತದೆ ಎನ್ನುವುದನ್ನು ನೋಡಬೇಕಿದೆ.
Comments