ಬೀರ್ ಬಲ್ ಚಿತ್ರತಂಡಕ್ಕೆ ವಿಶ್ ಮಾಡಿದ ‘ಅಯೋಗ್ಯ’..!!
ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ರೀತಿಯ ಕಥೆಗಳು ತೆರೆ ಮೇಲೆ ಬರುತ್ತಿವೆ.. ಅದೇ ರೀತಿ ಆರ್.ಜೆ. ಶ್ರೀನಿ ನಿರ್ದೇಶನ ಮಾಡಿ ನಟಿಸಿರುವ ಬೀರ್ ಬಲ್ ಚಿತ್ರದ ಟ್ರೈಲರ್ ಇದೀಗ ರಿಲೀಸ್ ಆಗಿದ್ದು, ಆ ಚಿತ್ರಕ್ಕೆ ನೀನಾಸಂ ಸತೀಶ್ ವಿಶ್ ಮಾಡಿದ್ದಾರೆ.
ಬೀರ್ ಬಲ್ ಚಿತ್ರದ ಟ್ರೈಲರ್ ರಿಲೀಸ್ ಆದ 24 ಗಂಟೆಯಲ್ಲೇ ಟ್ರೇಂಡಿಂಗ್ ನಲ್ಲಿದೆ. ಬೀರ್ ಬಲ್ ಚಿತ್ರದ ಟ್ರೈಲರ್ ನೋಡಿದ ನಟ ಸತೀಶ್ ಬೋಲ್ಡ್ ಆಗಿದ್ದು, ಚಿತ್ರದ ಮೇಕಿಂಗ್ ಹಾಗೂ ಸಂಗೀತಕ್ಕೆ ಫುಲ್ ಮಾರ್ಕ್ಸ್ ಅನ್ನು ನೀಡಿದ್ದಾರೆ. ನಿರ್ದೇಶಕ ಶ್ರೀನಿ ಚಿತ್ರದ ಟ್ರೈಲರ್ ನಲ್ಲೇ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಟ್ರೇಲರ್ ಸಿನಿಮಾ ನೋಡಬೇಕು ಎಂಬ ಕುತೂಹಲವನ್ನು ಮೂಡಿಸುತ್ತದೆ. ಎಲ್ಲರೂ ಚಿತ್ರವನ್ನೂ ನೋಡಿ ಹರಸಿ ಎಂದು ಬೀರ್ ಬಲ್ ಚಿತ್ರಕ್ಕೆ ಸತೀಶ್ ನೀನಾಸಂ ಶುಭ ಹಾರೈಸಿದ್ದಾರೆ. ಎಲ್ಲರೂ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ..
Comments