ಡ್ರಗ್ಸ್ ಮಾರುತ್ತಿದ್ದ ಈ ಖ್ಯಾತ ನಟಿ ಅರೆಸ್ಟ್ ..!
ಮಲಯಾಳಂ ಸಿನಿಮಾ ನಾಯಕಿಯೊಬ್ಬರು ಮಾದಕ ವಸ್ತುಗಳ ಮಾರಾಟದಲ್ಲಿ ಸಿಕ್ಕಿ ಬಿದ್ದಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಕೊಂಡುಕೊಂಡು ಅದನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.ಮಾದಕ ವಸ್ತುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಲಯಾಳಂ ನಟಿ ಹಾಗೂ ಆಕೆಯ ಚಾಲಕನನ್ನು ತೀರಿಕಾಕ್ಕಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಲಯಾಳಂನ ಟೀವಿ ಲೋಕದಲ್ಲಿ ಪ್ರಸಿದ್ಧಿ ಹೊಂದಿದ್ದ ನಟಿ ಅಶ್ವಥಾಯ್ ಬಾಬು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.
ಈಕೆ, ತನ್ನ ಚಾಲಕ ಬಿನೋಯ್ ಅಬ್ರಾಹಂನೊಂದಿಗೆ ಸೇರಿ ತನ್ನ ಮನೆಯ ಸಮೀಪವೇ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದಾಳೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ತಿರುವನಂತಪುರ ಮೂಲದ ಅಶ್ವಥಾಯ್ ತನ್ನ ಚಾಲಕ ಬಿನೋಯ್ ಅಬ್ರಾಹಂನ ಸಹಕಾರದಿಂದ ಬೆಂಗಳೂರಿನಿಂದ ಗಾಂಜಾ ಮತ್ತು ಡ್ರಗ್ಸ್ ಅನ್ನು ತರಿಸಿಕೊಳ್ಳುತ್ತಿದ್ದ ನಟಿ ಇಲ್ಲಿ ಮಾರಾಟ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಕಳೆದ ವರ್ಷ ಕೊಚ್ಚಿ ಪೊಲೀಸರು 280 ಕೋಟಿ ಮೌಲ್ಯದ ಮಾದಕ ವಸ್ತು ಹಾಗೂ ಡ್ರಗ್ಸ್‍ಗಳನ್ನುವಶ ಪಡಿಸಿಕೊಂಡಿದ್ದಾರೆ.
Comments