ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಕೆಜಿಎಫ್ ನ ಮತ್ತೊಂದು ಸಾಂಗ್ ರಿಲೀಸ್..!

ಸ್ಯಾಂಡಲ್ ವುಡ್ ಹಾಗೂ ಇತರೆ ಭಾರತೀಯ ಚಿತ್ರರಂಗದಲ್ಲಿಯೇ ಹೊಸ ದಾಖಲೆ ಬರೆಯಲು ರೆಡಿಯಾಗಿರುವ ಕೆಜಿಎಫ್ ಚಿತ್ರದ ಮತ್ತೊಂದು ಹಾಡು ಇಂದು ಬಿಡುಗಡೆಯಾಗಲಿದೆ.. ಈಗಾಗಲೇ ಕೆಜಿಎಫ್ ಚಿತ್ರದ ಟ್ರೈಲರ್, ಹಾಡುಗಳಿಂದ ಭರ್ಜರಿ ಸೌಂಡ್ ಮಾಡುತ್ತಿದ್ದು, ಇಂದು ಸಂಜೆ ಮತ್ತೊಂದು ಹಾಡು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.
ಗುರುವಾರ ಬಿಡುಗಡೆಯಾದ ಹಿಂದಿಯ ಗಲಿ ಗಲಿ ಸಾಂಗ್ ನಲ್ಲಿ ಯಶ್, ಮೌನಿ ಡ್ಯಾನ್ಸ್ ನೋಡಿ ಸಿನಿ ರಸಿಕರು ಫಿದಾ ಆಗಿದ್ದಾರೆ. ಈಗ ಮಿಲ್ಕಿ ಬ್ಯೂಟಿ ತಮನ್ನಾ ಜೊತೆ ನಟಿಸಿರುವ ಜೋಕೆ ವಿಡಿಯೋ ಸಾಂಗ್ ಇಂದು ಸಂಜೆ 7.02 ಕ್ಕೆ ರಿಲೀಸ್ ಆಗಲಿದೆಯಂತೆ. ಕೆಜಿಎಫ್ ಚಿತ್ರದ ಜೋಕೆ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದ್ದು, ರಾಕಿಂಗ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಡಾ. ರಾಜ್ ಕುಮಾರ್ ಅವರ ಪರೋಪಕಾರಿ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇದರಿಂದಾಗಿ ಯಶ್ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ.
Comments