ರಾಧಿಕಾ ಪಂಡಿತ್ ಬಿಟ್ಟು ಯಶ್ ಗೆ ಈ ನಟಿ ಅಂದರೆ ತುಂಬಾ ಇಷ್ಟವಂತೆ..!?
ಸ್ಯಾಂಡಲ್ ವುಡ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಸಾಕಷ್ಟು ನಾಯಕಿಯರು ನಟಿಸಿದ್ದಾರೆ. ಅಷ್ಟು ನಾಯಕಿಯರಲ್ಲಿ ಯಾವ ಹೀರೋಯಿನ್ ಯಶ್ ಗೆ ಇಷ್ಟ ಅಂತ ನಿಮಗೆ ಗೊತ್ತಾ..? ಬಾಲಿವುಡ್ ಮಾಧ್ಯಮದ ಜೊತೆ ಮಾತನಾಡಿದ ಯಶ್, ನೆಚ್ಚಿನ ಸಹ ನಟಿ ಯಾರು ಎಂದು ತಿಳಿಸಿದ್ದಾರೆ. ರಮ್ಯಾ, ದೀಪಾ ಸನ್ನಿಧಿ, ಕೃತಿ ಕರಬಂಧ, ಮೇಘನಾ ರಾಜ್, ಅಮೂಲ್ಯ, ಶಾನ್ವಿ ಶ್ರೀವಾಸ್ತವ್ ಸೇರಿದಂತೆ ಹಲವಾರು ನಟಿಯರ ಜೊತೆ ಯಶ್ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಯಶ್ ನನಗೆ ''ರಾಧಿಕಾ ಪಂಡಿತ್ ನನಗೆ ಆಲ್ ಟೈಂ ಬೆಸ್ಟ, ಅವರನ್ನ ಬಿಟ್ಟು ಅಮೂಲ್ಯ' ಎಂದಿದ್ದಾರೆ. ಅಮೂಲ್ಯ ಮತ್ತು ಯಶ್ 'ಗಜಕೇಸರಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ನನಗೆ ಅಮೂಲ್ಯ ಅಂದರೆ ತುಂಬಾ ಇಷ್ಟ ಎಂದಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ನೀವು ನಟನೆ ಮಾಡುವ ಆಗಿದ್ರೆ ಯಾವ ನಟಿಯನ್ನ ಆಯ್ಕೆ ಮಾಡಿಕೊಳ್ತೀರಾ ಎಂದು ಕೇಳಿದ್ದಕ್ಕೆ, ''ದೀಪಿಕಾ ಪಡುಕೋಣೆ, ಯಾಕಂದ್ರೆ, ಅವರು ನಮ್ಮ ಬೆಂಗಳೂರಿನ ಹುಡುಗಿ'' ಎಂದು ರಾಕಿಂಗ್ ಸ್ಟಾರ್ ಉತ್ತರಿಸಿದ್ದಾರೆ.
Comments