ರಾಕಿಂಗ್ ಸ್ಟಾರ್ ತಮಿಳು ಮಾತಾಡುವುದನ್ನು ನೋಡಿ ಅಭಿಮಾನಿಗಳು ದಿಲ್ ಖುಷ್..!
ಇಡೀ ಚಿತ್ರರಂಗವೇ ಕೆಜಿಎಫ್ ಸಿನಿಮಾಗಾಗಿ ಕಾಯುತ್ತಿದೆ. ಕೆಜಿಎಫ್ ಸಿನಿಮಾದ ಬಿಡುಗಡೆಗೆ ಈಗಾಗಲೇ ದಿನಗಣನೆ ಶುರುವಾಗಿದೆ.. ಕೆಜಿಎಫ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ರಾಕಿಂಗ್ ಸ್ಟಾರ್ ಯಶ್ ಈಗ ತಮಿಳುನಾಡು ಕಡೆ ತಮಿಳಿನಲ್ಲಿ ಪ್ರಚಾರ ಮಾಡುವುದನ್ನು ನೋಡಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ತಾಗಿಯೇ ಕಾಮೆಂಟ್ ಮಾಡಿದ್ದಾರೆ.
ತಮಿಳುನಾಡಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮತ್ತು ನಿನ್ನೆಯಷ್ಟೇ ಅಲ್ಲಿನ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಯಶ್ ಪಕ್ಕಾ ತಮಿಳಿನಲ್ಲಿ ಮಾತನಾಡಿದರು. ಯಾವ ನೆಲದಲ್ಲಿ ನಿಂತಿದ್ದೇನೋ ಆ ನೆಲದ ಭಾಷೆಗೆ, ಸಂಸ್ಕೃತಿಗೆ ಗೌರವ ಕೊಡುವುದು ನನ್ನ ಕರ್ತವ್ಯ. ಅದಕ್ಕೆ ತಮಿಳಿನಲ್ಲೇ ಮಾತನಾಡುತ್ತೇನೆ ಎಂದು ಯಶ್ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಈ ಮಾತಿನಿಂದಾಗಿ ತಮಿಳು ಸಿನಿ ಪ್ರಿಯರು ಖುಷಿಯಾಗಿದ್ದಾರೆ. ಸಿನಿಮಾ ಬಿಡುಗಡೆಯಾದ ಮೇಲೆ ಸಿನಿ ರಸಿಕರ ರೆಸ್ಪಾನ್ಸ್ ಹೇಗಿರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ..
Comments