ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಚಿತ್ರಕ್ಕೆ ನಾಯಕ ಯಾರು ಗೊತ್ತಾ..!?
ಇಡೀ ಚಿತ್ರರಂಗವೇ ಕೆಜಿಎಫ್ ಸಿನಿಮಾಗಾಗಿ ಕಾಯುತಿದೆ..ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿರುವ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಎಸ್… 2014 ರಲ್ಲಿ ತೆರೆಕಂಡ ಉಗ್ರಂ ಚಿತ್ರದ ಮೂಲಕ ನಿರ್ದೇಶನಕ್ಕೆ ಎಂಟ್ರಿ ಕೊಟ್ಟ ಪ್ರಶಾಂತ್ ನೀಲ್ ಆಗಲೇ ಉಗ್ರಂ ವೀರಂ ಎಂಬ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರಂತೆ.
ಇದೀಗ ಈ ಚಿತ್ರಕ್ಕೆ ಕಾಲ ಕೂಡಿ ಬಂದಿದ್ದು, ಮತ್ತೊಮ್ಮೆ ಶ್ರೀಮುರುಳಿ ಪ್ರಶಾಂತ್ ನೀಲ್ ಒಟ್ಟಿಗೆ ಕೆಲಸ ಮಾಡುತ್ತಾರೆ ಎನ್ನಲಾಗಿದೆ. ಉಗ್ರಂ ವೀರಂ ಚಿತ್ರಕ್ಕೂ ಶ್ರೀ ಮುರಳಿ ಅವರೇ ಹೀರೋ ಎನ್ನಲಾಗುತ್ತಿದ್ದು, ಕೆಜಿಎಫ್ ನಂತರ ಉಗ್ರಂ ವೀರಂ ಸೆಲೆಬ್ರೇಷನ್ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಉಗ್ರಂ ವೀರಂ ಚಿತ್ರದ ಸ್ಕ್ರಿಫ್ಟ್ ರೆಡಿಯಾಗಿದ್ದು, ಮುಂದಿನ ವರ್ಷ ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆ ಎನ್ನಲಾಗಿದೆ. ಕೆಜಿಎಫ್ ಅಂತಹ ಒಳ್ಳೆಯ ಸಿನಿಮಾ ಕೊಟ್ಟಿರೋ ಪ್ರಶಾಂತ್ ನೀಲ್ ಉಗ್ರಂ ವೀರಂ ಎಂಬ ಹೊಸ ಪ್ರಾಜೆಕ್ಟ್ ಗೆ ಕೈ ಹಾಕಲಾಗುತ್ತಿದ್ದಾರೆ
Comments