ಅಪ್ಪನ ಫೋಟೋ ಹಿಡಿದು ಶೂಟಿಂಗ್’ಗೆ ಬಂದ ಅಭಿಷೇಕ್ ಅಂಬರೀಶ್ ..!

ಸ್ಯಾಂಡಲ್ವುಡ್ ನ ರೆಬಲ್ ಸ್ಟಾರ್ ನಿಧನದ ಹಿನ್ನಲೆಯಲ್ಲಿ ಅವರ ಮಗ ಶೂಟಿಂಗ್’ಗೆ ಬಿಡುವು ಕೊಟ್ಟಿದ್ದರು. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಮತ್ತೆ ತಮ್ಮ ಚೊಚ್ಚಲ ಚಿತ್ರ 'ಅಮರ್' ಸಿನಿಮಾದ ಚಿತ್ರೀಕರಣದಲ್ಲಿ ಮತ್ತೆಎ ತೊಡಗಿದ್ದಾರೆ. ತಂದೆಯ ಫೋಟೋ ಹಿಡಿದುಕೊಂಡು ಅಭಿಷೇಕ್ ಮತ್ತೆ ತಮ್ಮ 'ಅಮರ್' ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ತಂದೆಯ ಫೋಟೋ ಹಿಡಿದುಕೊಂಡು ಅಭಿಷೇಕ್ ಮರಳಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಸ್ವತಹ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.
'ಕೆಲಸಕ್ಕೆ ಹೋಗುವಾಗ ನನ್ನಪ್ಪ ರೆಬೆಲ್ ಇದನ್ನೆಲ್ಲಾ ನೋಡುತ್ತಿದ್ದಾರೆ' ಎಂದು ಭಾವನಾತ್ಮಕವಾಗಿ ಅಭಿಷೇಕ್ ಬರೆದುಕೊಂಡಿದ್ದಾರೆ. ಅಂಬಿ ನಿಧನದ ದುಃಖದಲ್ಲಿದ್ದ ಅಭಿಷೇಕ್ ಈಗ ಮತ್ತೆ ಸಿನಿಮಾದತ್ತ ಗಮನ ಹರಿಸಿದ್ದಾರೆ, ಅಭಿಷೇಕ್ ಹಾಗೂ ತಾನ್ಯಾ ಹೋಪ್ ನಟಿಸುತ್ತಿರುವ ಈ ಚಿತ್ರವನ್ನು ನಾಗ್ ಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್ ನಾಗರಾಜ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ, ಸದ್ಯ 45 ದಿನಗಳ ಶೂಟಿಂಗ್ ಬಾಕಿಯಿದೆ. ಚಿತ್ರಕ್ಕೆ ನಾಗಶೇಖರ್ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಆದರೆ ನನ್ನ ಸಿನಿಮಾ ನೋಡಲು ನನ್ನ ಅಪ್ಪ ಇಲ್ಲ ಎಂಬುದೆ ಅಭಿಷೇಕ್ ಕೊರಗಾಗಿದೆ.
Comments