ಸದ್ದಿಲ್ಲದೆ ಸಹಾಯ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..!

ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ..ಪ್ರಾಣದ ಹಂಗು ತೊರೆದು ವನ್ಯಜೀವಿ ಕಳ್ಳಬೇಟೆ ತಡೆಗಟ್ಟುವ ಕೆಲಸ ಮಾಡುವ ಗುತ್ತಿಗೆ ನೌಕರರ ನೆರವಿಗೆ ಸ್ವಯಂ ಪ್ರೇರಿತರಾಗಿ ಸಹಾಯಕ್ಕೆ ದರ್ಶನ್ ಮುಂದಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ವನ್ಯಜೀವಿ ಕಳ್ಳಬೇಟೆ ಶಿಬಿರದಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರ ನೆರವಿಗೆ ದರ್ಶನ್ ಧಾವಿಸಿದ್ದಾರೆ. ಈ ಮೂಲಕ ಇನ್ನೊಂದು ಮಾನವೀಯ ಕೆಲಸವನ್ನು ದರ್ಶನ್ ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಇತ್ತೀಚೆಗೆ ಶಿಬಿರಕ್ಕೆ ಹೋಗಿದ್ದ ದರ್ಶನ್ ಗುತ್ತಿಗೆ ನೌಕರರ ಕಷ್ಟ ಕೇಳಿಬಂದಿದ್ದರು... ತಕ್ಷಣ ಈ ನೌಕರರ ಕ್ಷೇಮಾಭಿವೃದ್ಧಿಗೆ 12 ಲಕ್ಷ ರೂಪಾಯಿ ನೀಡಿದ್ದಾರೆ. ಅರಣ್ಯ ಇಲಾಖೆಯೂ ಈ ಹಣವನ್ನು ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿ ಅದರ ಬಡ್ಡಿ ಹಣವನ್ನು ಈ ನೌಕರರ ಕಷ್ಟಕ್ಕೆ ನೀಡಲು ದರ್ಶನ್ ಮುಂದಾಗಿದ್ದಾರೆ.
Comments