ಇಂದು ಸಪ್ತಪದಿ ತುಳಿಯಲಿರುವ ದೂದ್ ಪೇಡಾ ದಿಗಂತ್-ಐಂದ್ರಿತಾ ರೈ

ಇಂದು ನಂದಿಬೆಟ್ಟದಲ್ಲಿ ಸ್ಯಾಂಡಲ್ ವುಡ್’ನ ಕ್ಯೂಟ್ ಕಪಲ್ ದೂದ್ ಪೇಡ್ ದಿಗಂತ್-ಐಂದ್ರಿತಾ ರೈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ..ನಂದಿ ಬೆಟ್ಟದ ತಪ್ಪಲಲ್ಲಿರುವ ಡಿಸ್ಕವರಿ ವಿಲೇಜ್ ನಲ್ಲಿ ಮಂಗಳವಾರ ಅರಿಶಿಣ ಶಾಸ್ತ್ರ ನೆರವೇರಿದೆ. ಐಂದ್ರಿತಾ ಅವರ ಮನೆಯಂಗಳದಲ್ಲೇ ಬೆಳೆದಿರುವ ಅರಿಶಿನದಿಂದ ಅರಿಶಿನ ಶಾಸ್ತ್ರ ಮಾಡಿಸಿಕೊಂಡು ಸಂಭ್ರಮ ಪಟ್ಟಿದ್ದಾರೆ.
ಇಂದು ಸಂಜೆ ನಂದಿಬೆಟ್ಟದ ತಪ್ಪಲಿನಲ್ಲಿ ಐಂದ್ರಿತಾ ರೈ, ದಿಗಂತ್ ಜೋಡಿ ಸಪ್ತಪದಿ ತುಳಿಯಲಿದ್ದಾರೆ,,. ಕುಟುಂಬದವರು ಹಾಗೂ ಚಿತ್ರರಂಗದ ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣ ಕೊಟ್ಟಿದ್ದಾರೆ. ಶೇರ್ ಚಾಟ್ ಸಂಸ್ಥೆ, ಐಂದ್ರಿತಾ, ದಿಗಂತ್ ಜೋಡಿಯ ಮದುವೆಯ ಫೋಟೋ ಹಾಗೂ ವಿಡಿಯೋಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಒಟ್ಟಾರೆ ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಸತಿ ಪತಿಗಳಾಗುತ್ತಿದ್ದಾರೆ. ಹ್ಯಾಪಿ ಮ್ಯಾರಿಡ್ ಲೈಫ್ ಆಂಡಿ ಅಂಡ್ ದಿಗಂತ್
Comments