ಹೊಸ ವೇಷದಲ್ಲಿ ಮಿಂಚಲು ಸಿದ್ದರಾದ ನವರಸನಾಯಕ ಜಗ್ಗೇಶ್

11 Dec 2018 3:11 PM | Entertainment
434 Report

ನವರಸ ನಾಯಕ ಜಗ್ಗೇಶ್ ಸಿನಿಮಾ ಅಂದರೆ ಪಕ್ಕಾ ಕಾಮಿಡಿ ಸಿನಿಮಾ ಅಂತಿದ್ದವರಿಗೆ 8ಎಂಎಂ ಸಿನಿಮಾ ಒಂದು ಉತ್ತಮ ಉದಾಹರಣೆಯಾಗಿದೆ. ಈ ರೀತಿಯ ಸಿನಿಮಾವನ್ನು ಕೂಡ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನವರಸನಾಯಕ ಜಗ್ಗೇಶ್ ಇತ್ತೀಚೆಗೆ ತಮ್ಮ ಇಮೇಜ್ ಬದಲಿಸುವ ಚಿತ್ರಗಳತ್ತ ಗಮನಹರಿಸುತ್ತಿದ್ದಾರೆ. ಕಾಮಿಡಿ ನಾಯಕನಾಗಿ ಗುರುತಿಸಿಕೊಂಡಿದ್ದ ಜಗ್ಗೇಶ್ ಇತ್ತೀಚೆಗಷ್ಟೇ 8ಎಂಎಂ ಚಿತ್ರದಲ್ಲಿ ಗಂಭೀರ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು.

ಮತ್ತೊಮ್ಮೆ ಜಗ್ಗೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ 'ಕಾಳಿದಾಸ ಕನ್ನಡ ಮೇಸ್ಟ್ರು' ಚಿತ್ರದ ಮುಹೂರ್ತ ಮುಗಿದಿದೆ. ಹೆಸರೇ ಹೇಳುವಂತೆ ಚಿತ್ರದಲ್ಲಿ ಜಗ್ಗೇಶ್ ಕನ್ನಡ ಮೇಸ್ಟ್ರ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಸೇರಿಸಲು ಹಣ ಹೊಂದಿಸುವುದೇ ದೊಡ್ಡ ತಲೆನೋವು. ರಾಜಕೀಯ ಪಕ್ಷಗಳು ತಮಗೆ ಓಟ್ ಹಾಕಿದವರಿಗೆ ಪುಕ್ಸಟೆ ಏನಾದ್ರೂ ಕೊಟ್ಟು ಕೈ ತೊಳೆದುಕೊಳ್ಳುತ್ತವೆ. ಆದರೆ ಏನಾದ್ರೂ ಕೊಡುವುದಿದ್ದರೆ ವಿದ್ಯೆ ಫ್ರೀಯಾಗಿ ಕೊಡಲಿ. ಇದರ ಬಗ್ಗೆಯೂ ಗಮನ ಹರಿಸಬೇಕು ಎಂದು ಜಗ್ಗೇಶ್ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಈ ಸಿನಿಮಾ ತೆರೆ ಮೇಲೆ ಯಾವ ರೀತಿ ಮೂಡಿ ಬರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments