ಅನಾರೋಗ್ಯ ಪೀಡಿತ ಅಭಿಮಾನಿಯ ಬೇಡಿಕೆ ಈಡೇರಿಸಲು ಮುಂದಾದ ಕಿಚ್ಚ ಸುದೀಪ್..!!
ಸಾಕಷ್ಟು ಅಭಿಮಾನಿಗಳು ತಮ್ಮ ಜೀವನದ ಕೊನೆಯ ಆಸೆ ತಮ್ಮ ತಮ್ಮ ನೆಚ್ಚಿನ ನಟ ನಟಿಯರೊಂದಿಗೆ ಕಳೆಯಲು ಇಷ್ಟ ಪಡುತ್ತಾರೆ. ಅಷ್ಟೆ ಅಲ್ಲದೆ ಅಂತಹ ಆಸೆಗಳನ್ನು ಸೆಲೆಬ್ರಿಟಿಗಳು ನೆರವೇರಿಸುವ ಸುದ್ದಿಗಳನ್ನು ಸಾಕಷ್ಟು ಓದಿದ್ದೇವೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಅಂತಹದ್ದೇ ಕೆಲಸ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಯಾಗಿರುವ ರಾಹುಲ್ ಎನ್ನುವ 12 ವರ್ಷದ ಬಾಲಕ ಬ್ರೈನ್ ಹೆಮರೇಜ್ ನಂತಹ ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದು ಈತ ಜೀವನದಲ್ಲಿ ಒಂದೇ ಒಂದು ಬಾರಿ ಕಿಚ್ಚನನ್ನು ಭೇಟಿಯಾಗುವ ಆಸೆ ಇದೆಯಂತೆ.
ಇದನ್ನು ಎನ್ ಜಿಒ ಒಂದು ಕಿಚ್ಚ ಸುದೀಪ್ ಗೆ ಟ್ವೀಟ್ ಮುಖಾಂತರ ತಿಳಿಸಿದ್ದರು. ಮೊದಲು ಈತನ ಬಗ್ಗೆ ಡೀಟೈಲ್ ಪಡೆದುಕೊಂಡ ಕಿಚ್ಚ ಇದೀಗ ತಾವು ಸದ್ಯಕ್ಕೆ ಬೆಂಗಳೂರಿನಲ್ಲಿಲ್ಲ. ಬೆಂಗಳೂರಿಗೆ ಬಂದ ತಕ್ಷಣ ಶುಕ್ರವಾರ ರಾಹುಲ್ ನನ್ನು ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ನನ್ನ ಪ್ರಾರ್ಥನೆ, ಹಾರೈಕೆ ಯಾವತ್ತೂ ಆತನ ಜೊತೆಗಿರುತ್ತದೆ ಎಂದಿದ್ದಾರೆ. ಅಭಿಮಾನಿಯ ಕಷ್ಟಕ್ಕೆ ಮರುಗಿದ ಕಿಚ್ಚನಿಗೆ ಅಭಿಮಾನಿಗಳು ಅಭಿನಂದಿಸಿದ್ದಾರೆ. ಇಂತಹ ಅಭಿಮಾನದ ಅಭಿಮಾನಕ್ಕೆ ನಟ ನಟಿಯರು ಪಾತ್ರರಾಗುವುದು ಖುಷಿಯ ಸಂಗತಿ..
Comments