ನಿಶ್ಚಿತಾರ್ಥ ಮಾಡಿಕೊಂಡ ಆ್ಯಕ್ಷನ್ ಪ್ರಿನ್ಸ್’ಗೆ ಚಾಲೆಂಜಿಂಗ್ ಸ್ಟಾರ್ ಉಡುಗೊರೆ ಏನು ಗೊತ್ತಾ..?!

ಕಳೆದ ಭಾನುವಾರವಷ್ಟೆ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ..ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ನಟ ದರ್ಶನ್ ಮಾತ್ರವಲ್ಲದೆ, ಚಿತ್ರರಂಗದ ಅನೇಕ ಗಣ್ಯಾತಿ ಗಣ್ಯರು ಆಗಮಿಸಿದ್ದರು.
ಧ್ರುವ ಸರ್ಜಾಗೆ ಸ್ವಂತ ಸಹೋದರನಂತೆ ಬೆಂಬಲಿಸುವ ದರ್ಶನ್ ನಿನ್ನೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲೂ ಮನೆ ಕಾರ್ಯಕ್ರಮದಂತೆ ಭಾಗವಹಿಸಿದ್ದಾರೆ. ನಂತರ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿಗೆ ದರ್ಶನ್ ಉಂಗುರಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.. ಇನ್ನು, ಧ್ರುವ ಸರ್ಜಾ ನಿನ್ನೆ ನಿಶ್ಚಿತಾರ್ಥ ಮುಗಿಸಿದ್ದು, ಮೂರು-ನಾಲ್ಕು ತಿಂಗಳೊಳಗೇ ಇವರ ವಿವಾಹ ನಡೆಯಲಿದೆ ಎಂದು ಅರ್ಜುನ್ ಸರ್ಜಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
Comments