ಶಾಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಕರೀನಾ ಕಪೂರ್ ಮಗನೇ ಫಸ್ಟ್..!
ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಹಾಗೂ ನಟ ಸೈಫ್ ಅಲಿ ಖಾನ್ ಮಗ ತೈಮೂರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರೋದು ಎಲ್ಲರಿಗೂ ಕೂಡ ತಿಳಿದೆ ಇದೆ... ಇದೀಗ ಸ್ಟಾರ್ಸ್ ಕಿಡ್ ಗಳಲ್ಲಿ ಕರೀನಾ ಕಪೂರ್ ಮಗ ತೈಮೂರ್ ಹೆಸರು ಮುಂದಿದೆ. ಮುದ್ದು ಮುದ್ದಾಗಿರುವ ತೈಮೂರ್ ಸ್ಕೂಲ್ ಡ್ರೆಸ್ ನಲ್ಲಿ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡ ವಿಷ್ಯ ಇದೀಗ ಸುದ್ದಿಯಾಗಿದೆ.
ಹೌದು.. ತೈಮೂರ್ ಸ್ಕೂಲ್ ಡ್ರೆಸ್ ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೈಮೂರ್ ಪ್ಲೇ ಸ್ಕೂಲಿನಲ್ಲಿ ಸ್ಪರ್ಧೆಯೊಂದು ನಡೆದಿತ್ತು. ಅದ್ರಲ್ಲಿ ಪಾಲ್ಗೊಂಡಿದ್ದ ತೈಮೂರ್ ಮೊದಲ ಸ್ಥಾನವನ್ನು ಪಡೆದಿದ್ದಾನೆ. ಗೋಲ್ಡ್ ಮೆಡಲ್ ಪಡೆದಿರುವ ತೈಮೂರ್ ತಾಯಿ ಕರೀನಾ ಜೊತೆಗಿರುವ ಫೋಟೋ ವೈರಲ್ ಆಗಿದೆ. ತೈಮೂರ್ ಈ ಕ್ಯೂಟ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಟ್ಟಾರೆ ಅಪ್ಪ ಅಮ್ಮನಂತೆ ಮಗನೂ ಫೇಮಸ್ ಆಗುವುದರಲ್ಲಿ ನೋ ಡೌಟ್ ಎನ್ನಬಹುದು..
Comments