ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಇನ್ ಸ್ಟಾಗ್ರಾಂ ಖಾತೆ ತೆರೆದ ರಾಕಿಂಗ್ ಸ್ಟಾರ್..!!

ಅಭಿಮಾನಿಗಳು ತಮಗೆ ಇಷ್ಟವಾದ ನಟ ನಟಿಯರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಫಾಲೋ ಮಾಡುವುದು ಎಲ್ಲರಿಗೂಕೂಡ ತಿಳಿದೆ ಇದೆ. ಇತ್ತೀಚೆಗೆ ಎಲ್ಲಾ ಸ್ಟಾರ್ ನಟರೂ ಇನ್ ಸ್ಟಾಗ್ರಾಂ ಖಾತೆ ಹೊಂದಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ ಟ್ವಿಟರ್, ಫೇಸ್ ಬುಕ್ ಗಷ್ಟೇ ಸೀಮಿತರಾಗಿದ್ದರು. ಇದೀಗ ಯಶ್ ಇನ್ ಸ್ಟಾಗ್ರಾಂ ಖಾತೆಯನ್ನು ಕೊನೆಗೂ ತೆರೆದಿದ್ದಾರೆ.
ಯಾವುದೇ ಕೆಲಸ ಮಾಡುವುದಿದ್ದರೂ ಸಾರ್ವಜನಿಕವಾಗಿ ಹೇಳಿಕೊಂಡೇ ಮಾಡುವ ಯಶ್, ಇದೀಗ ಇನ್ ಸ್ಟಾಗ್ರಾಂಗೆ ಎಂಟ್ರಿ ಕೊಡುವ ಮೊದಲೂ ಫೇಸ್ ಬುಕ್ ನಲ್ಲಿ ಅಭಿಮಾನಿಗಳ ಅಭಿಪ್ರಾಯ ಕೇಳಿಕೊಂಡೇ ಖಾತೆ ತೆರೆಯುವ ನಿರ್ಧಾರ ಮಾಡಿದ್ದಾರೆ. ಇನ್ನು ಮುಂದೆ ಯಶ್ ರನ್ನು ಇನ್ ಸ್ಟಾಗ್ರಾಂನಲ್ಲಿ @TheNameIsYash ಎಂಬ ಖಾತೆಯಲ್ಲಿ ಫಾಲೋ ಮಾಡಬಹುದಾಗಿದೆ. ಯಶ್ ರ ಲೇಟೆಸ್ಟ್ ಅಪ್ ಡೇಟ್ ಗಾಗಿ ಈ ಖಾತೆಯನ್ನು ಫಾಲೋ ಮಾಡಬಹುದು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇದರೊಂದಿಗೆ ಅವರ ಹೆಸರಿನಲ್ಲಿ ಬರುತ್ತಿದ್ದ ನಕಲಿ ಖಾತೆಗಳಿಗೂ ಕಡಿವಾಣ ಬಿದ್ದಂತಾಗಿದೆ. ಒಟ್ಟಾರೆ ಯಶ್ ಅಭಿಮಾನಿಗಳಿಗೆ ಇದು ಕುತೂಹಲದ ವಿಷಯವಾಗಿದೆ.
Comments