ಅಭಿಷೇಕ್ ಅಂಬರೀಶ್ ಹೆಸರಿನಲ್ಲಿ ನಕಲಿ ಖಾತೆ: ಈ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದೇನು?
ಇತ್ತಿಚಿಗೆ ಸೋಷಿಯಲ್ ಮೀಡಿಯಾದ ಹಾವಳಿಗಳು ಹೆಚ್ಚಾಗಿಐಏ ಇವೆ.. ಫೇಸ್ ಬುಕ್, ಟ್ವಿಟ್ಟರ್, ಇನ್ಟಗ್ರಾಮ್ ಅಂತ ದಿನವಿಡಿ ಬ್ಯುಸಿಯಾಗಿರುತ್ತಾರೆ.. ಅಷ್ಟೆ ಅಲ್ಲದೆ ಇತ್ತೀಚೆಗೆ ಸೆಲೆಬ್ರಿಟಿಗಳು ಅವರ ಮಕ್ಕಳ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳ ಹಾವಳಿ ಜೋರಾಗುತ್ತಿದೆ. ಇದೀಗ ಅಂಬರೀಶ್ ಪುತ್ರ ಅಭಿಷೇಕ್ ಹೆಸರಿನಲ್ಲಿ ಬಂದ ಟ್ವಿಟರ್ ಖಾತೆಯೊಂದರ ಬಗ್ಗೆ ಸುಮಲತಾ ಅಂಬರೀಷ್ ಅವರು ಸ್ಪಷ್ಟನೆ ನೀಡಿದ್ದಾರೆ.
ಅಂಬರೀಶ್ ನಿಧನರಾದ ಬಳಿಕ ಮಾಧ್ಯಮಗಳಲ್ಲಿ ಸಾಕಷ್ಟು ಕಾಣಿಸಿಕೊಂಡಿದ್ದ ಅಭಿಷೇಕ್ ಹೆಸರಿನಲ್ಲಿ ಟ್ವಿಟರ್ ನಲ್ಲಿ ನಕಲಿ ಖಾತೆಯೊಂದನ್ನು ತೆರೆಯಲಾಗಿದೆ. #AbhishekAmbareesh ಹೆಸರಿನ ಈ ಖಾತೆ ದುರುಪಯೋಗವಾಗುವ ಮೊದಲೇ ಸುಮಲತಾ ಅಂಬರೀಶ್ ಅವರು ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಭಿಷೇಕ್ ಇದುವರೆಗೆ ಯಾವುದೇ ಟ್ವಿಟರ್ ಖಾತೆ ತೆರೆದಿಲ್ಲ. ಈ ಹೆಸರಿನ ಖಾತೆ ಅಭಿಯದ್ದಲ್ಲ. ದಯವಿಟ್ಟು ಇದನ್ನು ನಂಬಿ ಫಾಲೋ ಮಾಡಬೇಡಿ ಎಂದು ಸುಮಲತಾ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾಗಿ ಇಂತಹ ನಕಲಿ ಖಾತೆಗಳ ಯಾರು ನಂಬಬಾರದು.
Comments