ಧ್ರುವಸರ್ಜಾ-ಪ್ರೇರಣಾ ಮದುವೆಗೆ ಡೇಟ್ ಫಿಕ್ಸ್..!

ಸ್ಯಾಂಡಲ್’ವುಡ್ ನಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನ ಎಂಬ ಕಹಿಯನ್ನು ಬಿಟ್ಟರೆ ಮಿಕ್ಕಿದೆಲ್ಲಾ ಒಳ್ಳೆಯದೆ ಆಗುತ್ತಿದೆ.. ಅಜಯ್ ರಾವ್ ಹಾಗೂ ಯಶ್ ಅಪ್ಪ ಆಗಿದ್ದು ಎಂದು ಕಡೆ ಸಂಭ್ರಮ… ದಿಗಂತ್ ಐದ್ರಿಂತಾ ರೇ ಮದುವೆ ಒಂದು ಕಡೆ.. ನೆನ್ನೆ ಅಷ್ಟೆ ಅದ್ದೂರಿಯಿಂದ ನಿಶ್ಚಿತಾರ್ಥ ಮಾಡಿಕೊಂಡ ಬಹದ್ದೂರ್ ಗಂಡಿಗೆ ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ. ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ-ಪ್ರೇರಣಾ ಅವರ ನಿಶ್ಚಿತಾರ್ಥ ನಿನ್ನೆ ಬೆಂಗಳೂರಿನ ಬನಶಂಕರಿಯ ಆಂಜನೇಯ ಸನ್ನಿಧಿಯಲ್ಲಿ ನಡೆಯಿತು..
ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರಿಗೆ ಧ್ರುವ ಸರ್ಜಾ ವಜ್ರದ ಉಂಗುರವನ್ನು ಹಾಕುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಧ್ರುವ ಮತ್ತು ಪ್ರೇರಣಾ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದೆ. ಎಸ್.. ಧ್ರುವ ಸರ್ಜಾ ಪ್ರೇರಣಾ ಅವರ ಮದುವೆಯನ್ನು ಗುರು ಹಿರಿಯರು ಮುಂದಿನ ವರ್ಷ ಏಪ್ರಿಲ್ ನಲ್ಲಿ ಫಿಕ್ಸ್ ಮಾಡಿದ್ದಾರೆ. ಆದರೆ ಇನ್ನೂ ದಿನಾಂಕವನ್ನು ನಿಗದಿ ಮಾಡಿಲ್ಲ. ಏಪ್ರಿಲ್ ಕೊನೆಯ ವಾರದಲ್ಲಿ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ಪೊಗರಿನ ಹುಡುಗನ ನಿಶ್ಚಿತಾರ್ಥದಿಂದ ಹುಡುಗಿಯರು ನಿರಾಸೆಯಾಗಿರುವುದಂತೂ ಸುಳ್ಳಲ್ಲ..
Comments