ಯಶ್ ಮಗಳಿಗೆ ಸಿಕ್ತು ರೆಬಲ್ ಸ್ಟಾರ್ ಅಂಬರೀಶ್ ನೀಡಿದ ದುಬಾರಿ ಗಿಫ್ಟ್..!!

ರೆಬಲ್ ಸ್ಟಾರ್ ಅಂಬರೀಶ್ ಹಾಗೂ ರಾಕಿಂಗ್ ಸ್ಟಾರ್ ಯಶ್ ತುಂಬಾ ಆಪ್ತರಾಗಿದ್ದರು…ಅವರ ನಡುವೆ ಒಂಥರಾ ಅವಿನಾಭಾವ ಸಂಬಂಧವಿದೆ.. ಇದೀಗ ಯಶ್ ದಂಪತಿಯ ಮುದ್ದಾದ ಮಗುವಿಗೆ ರೆಬಲ್ ಸ್ಟಾರ್ ಅಂಬರೀಶ್ ಗಿಫ್ಟ್ ಒಂದನ್ನು ನೀಡಿದ್ದಾರೆ.. ರಾಧಿಕ ಪಂಡಿತ್ ಅವರ ಸೀಮಂತದ ಸಂದರ್ಭದಲ್ಲಿ ಆ ಮಗುವಿಗೆ ಸುಮಾರು 1.50 ಲಕ್ಷದ ಮೌಲ್ಯದ ತೊಟ್ಟಿಲು ಆರ್ಡರ್ ಮಾಡಿದ್ದಾರೆ..ತೊಟ್ಟಿಲು ಸಿದ್ದವಾಗಿರುವ ಬಗ್ಗೆ ಅಂಗಡಿಯವರು ಸುಮಲತಾ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಈ ವಿಷಯ ಕೇಳಿ ಸುಮಲತಾ ಅವರಿಗೆ ಅಚ್ಚರಿಯಾಗಿದೆ.. ನಾವ್ಯಾರೂ ತೊಟ್ಟಿಲನ್ನು ಆರ್ಡರ್ ಕೊಟ್ಟಿಲ್ಲ.. ಎಂದು ಶಾಕ್ ಆಗಿದ್ದಾರೆ... ಅದು ಅಂಬಿಯೇ ಖುದ್ದು ಆರ್ಡರ್ ಕೊಟ್ಟು ಮಾಡಿಸಿದ್ದ ತೊಟ್ಟಿಲಾಗಿತ್ತು... ಅದಕ್ಕಿಂತ ಹೆಚ್ಚಾಗಿ ಈ ಆರ್ಡರ್ ಕೊಟ್ಟಿದ್ದು ಅಂಬರೀಶ್ ಎನ್ನುವುದು ಆ ಅಂಗಡಿ ಮಾಲೀಕರಿಗೆ ಗೊತ್ತಿರಲಿಲ್ಲ. ಸಂಪರ್ಕಕ್ಕಾಗಿ ಅಂಬರೀಶ್ ತಮ್ಮ ಪತ್ನಿ ಸುಮಲತಾ ಮೊಬೈಲ್ ನಂಬರ್ ಮಾಲೀಕನಿಗೆ ಕೊಟ್ಟಿದ್ದರಂತೆ.. ಇದನ್ನೆ ಕಾಕತಾಳೀಯ ಅನ್ನೋದು ಅನ್ಸುತ್ತೆ… ಯಾವಾಗ ಸುಮಲತಾಗೆ ಈ ವಿಷಯ ಗೊತ್ತಾಯಿತೋ, ಅವರು ಯಶ್‍ಗೆ ಫೋನ್ ಮಾಡಿ ನಿಮ್ಮ ಮಗಳು ಅದೃಷ್ಟ ಮಾಡಿದ್ದಾಳೆ. ಅವಳಿಗಾಗಿ ಸ್ವರ್ಗದಿಂದ ಗಿಫ್ಟ್ ಬಂದಿದೆ ಎಂದು ಹೇಳಿ ದುಬಾರಿ ತೊಟ್ಟಿಲು ಹಸ್ತಾಂತಿರಿಸುವುದಾಗಿ ಹೇಳಿದ್ದಾರೆ…
Comments