ಕಿಚ್ಚ ಸುದೀಪ್ ಗೆ 'ದಿ ವಿಲನ್'ನಂತಹಾ ಸಿನಿಮಾ ಇನ್ಮುಂದೆ ಮಾಡ್ಬೇಡಿ ಅಂತ ಹೇಳಿದ್ದು ಯಾರ್ ಗೊತ್ತಾ..?

ದಿ ವಿಲನ್ ಸಿನಿಮಾ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಕ್ರೇಜ್ ಕ್ರೀಯೆಟ್ ಮಾಡಿತ್ತು.. ಸಿನಿಮಾದ ಬಗ್ಗೆ ಹೈಪ್ ಕ್ರಿಯೇಟ್ ಆಗಿದ್ದು ನೋಡಿ ಸಿನಿಮಾ ಹೇಗೋ ಇದೆ ಎಂದು ಕುತೂಹಲದಿಂದ ಥಿಯೇಟರ್ ಗೆ ಹೋದರೆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಇಲ್ಲ ಎಂದು ಜನ ಬೇಸರವಾಗಿದ್ದು ಉಂಟು… ದಿ ವಿಲನ್ ಸಿನಿಮಾ 50 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.. ಈ ನಿಮ್ಮ ಅಭಿಮಾನಕ್ಕೆ ಧನ್ಯವಾದ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ..
ಸುದೀಪ್ ಈ ರೀತಿ ಟ್ವೀಟ್ ಮಾಡುತ್ತಿದ್ದಂತೇ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಅಣ್ಣಾ ಇಂತಹ ಸಿನಿಮಾ ಇನ್ಮುಂದೆ ಮಾಡ್ಬೇಡಿ ಎಂದು ನಿರಾಸೆ ಮೂಡಿಸಿದ ಸಿನಿಮಾವಾಗಿದ್ದು, ಇದು 25 ದಿನವಾದರೂ ಪೂರ್ತಿಗೊಳಿಸಿದ್ದು ಹೇಗೆ ಎಂದೇ ಅಚ್ಚರಿಯಾಗುತ್ತಿದೆ ಎಂದು ಅಭಿಮಾನಿಗಳು ನಿರಾಸೆ ವ್ಯಕ್ತ ಪಡಿಸಿದ್ದಾರೆ. ಇನ್ನು ಕೆಲವರು ನಿಮ್ಮ, ಶಿವಣ್ಣನ ಅಭಿನಯಕ್ಕಾಗಿ ಈ ಸಿನಿಮಾ ನೋಡಬೇಕಷ್ಟೇ. ಬೇರೇನೂ ಇದರಲ್ಲಿ ಇಲ್ಲ ಎಂದು ಟೀಕಿಸಿದ್ದಾರೆ.
Comments