ಒಂದೇ ವೇದಿಕೆಯಲ್ಲಿ ಒಂದಾಗ್ತಿದ್ದಾರೆ ರಾಕಿಂಗ್ ಸ್ಟಾರ್ …ರಾಜಮೌಳಿ…!! ಕಾರಣ ಏನ್ ಗೊತ್ತಾ…?
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಇದೀಗ ಸಕ್ಸಸ್ ನತ್ತ ಮುಖ ಮಾಡಿ ನಿಂತಿದ್ದಾರೆ… ಇದೀಗ ಮನೆಗೆ ಬಂದಿರುವ ಭಾಗ್ಯಲಕ್ಷ್ಮಿ ಜೊತೆ ಖುಷಿಯಲ್ಲಿದ್ದಾರೆ. ಕೆಜಿಎಫ್ ಕ್ರೇಜ್ ನಲ್ಲಿ ಮುಳುಗಿದ್ದಾಗ ರಾಕಿಂಗ್ ಸ್ಟಾರ್ ಯಶ್ ಮುಂದೆ 'ಬಾಹುಬಲಿ' ಖ್ಯಾತಿಯ ರಾಜಮೌಳಿ ಜತೆ ಸಿನಿಮಾ ಮಾಡುತ್ತಾರೆ ಎಂದೆಲ್ಲಾ ಗಾಳಿ ಸುದ್ದಿ ಹರಿದಾಡುತ್ತಿತ್ತು..ಆದರೆ ಇದೀಗ ಕೊನೆಗೆ ಸ್ವತಃ ಯಶ್ ಆ ಸುದ್ದಿ ಎಲ್ಲಾ ಸುಳ್ಳು. ನಾನು ರಾಜಮೌಳಿ ಜತೆ ಸಿನಿಮಾ ಮಾಡುತ್ತಿಲ್ಲ.
ಈ ಸುದ್ದಿಗಳನ್ನೆಲ್ಲಾ ನಂಬಬೇಡಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ನಿಜವಾದ ಸುದ್ದಿ ಎಂದರೆ ರಾಜಮೌಳಿ ಜತೆ ಯಶ್ ಸಿನಿಮಾ ಮಾಡುತ್ತಿಲ್ಲ, ಬದಲಾಗಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಯಶ್ ಅಭಿನಯ ಕೆಜಿಎಫ್ ಸಿನಿಮಾದ ಪ್ರಿರಿಲೀಸ್ ಕಾರ್ಯಕ್ರಮವು ಡಿಸೆಂಬರ್ 9 ರಂದು ಹೈದರಾಬಾದ್ ನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜಮೌಳಿ ಆಗಮಿಸುತ್ತಿದ್ದಾರೆ. ಹೀಗಾಗಿ ಯಶ್-ರಾಜಮೌಳಿ ವೇದಿಕೆ ಹಂಚಿಕೊಳ್ಳುತ್ತಿರುವುದು ಕನ್ ಫರ್ಮ್ ಆಗಿದೆ ಎಂದು ತಿಳಿಸಿದ್ದಾರೆ.
Comments