ತಮಿಳಿನ ಬ್ಲಾಕ್ ಬಸ್ಟರ್ “96” ಕನ್ನಡಕ್ಕೆ ರಿಮೇಕ್..!! ನಾಯಕ ಯಾರ್ ಗೊತ್ತಾ..?

06 Dec 2018 4:44 PM | Entertainment
330 Report

'96' ತಮಿಳಿನ ಈ ಸಿನಿಮಾ ಸಖತ್ ಸೂಪರ್ ಹಿಟ್  ಸಿನಿಮಾವಾಗಿದ್ದು ಎಲ್ಲರಿಗೂ ತಿಳಿದೆ ಇದೆ.. ಈ ಸೂಪರ್‌ಹಿಟ್ ಸಿನಿಮಾ ಇದೀಗ  ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ನಿರ್ಮಾಪಕ ರಾಮು ಆ ಚಿತ್ರದ ರಿಮೇಕ್ ರೈಟ್ಸ್ ಪಡೆದಿದ್ದು, ಪ್ರೀತಂ ಗುಬ್ಬಿ ನಿರ್ದೇಶನದೊಂದಿಗೆ ಅದು '99' ಹೆಸರಲ್ಲಿ ಕನ್ನಡಕ್ಕೆ ಬದಲಾಗುತ್ತಿದೆ. ಎಲ್ಲರ ಬಾಳಲ್ಲಿ ಜೀವನದಲ್ಲಿ ಒಂದು ಬಾರಿ ಬಂದು ಹೋದ ಆ ಪ್ರೀತಿಯನ್ನು ತೋರಿಸಿದ, ತಮ್ಮ ಹಳೆ ಪ್ರೀತಿಯ ನೆನಪು ಮಾಡಿಸಿದ ಚಿತ್ರ 96.

ಮೂಲ ಚಿತ್ರದಲ್ಲಿ ವಿಜಯ ಸೇತುಪತಿ ನಿರ್ವಹಿಸಿದ್ದ ಪಾತ್ರಕ್ಕೆ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಬಣ್ಣ ಹಚ್ಚುತ್ತಿದ್ದಾರೆ. ನಾಯಕಿ ಆಯ್ಕೆಯ ಹುಡುಕಾಟದಲ್ಲಿದ್ದಾರೆ. ಈ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೀತಂ ಗುಬ್ಬಿ ಮತ್ತು ಗಣೇಶ್ ಒಂದಾಗುತ್ತಿದ್ದಾರೆ. ಮಧುರವಾದ ಪ್ರೇಮಕತೆ ಹೊಂದಿರುವ '96' ತಮಿಳಿನ ಬ್ಲಾಕ್‌ಬಸ್ಟರ್ ಚಿತ್ರ. ವಿಜಯ್ ಸೇತುಪತಿ ಮತ್ತು ತ್ರಿಷಾ ನಟನೆಯ ಈ ಚಿತ್ರ ಜನರಲ್ಲಿ ಕ್ರೇಜ್ ಸೃಷ್ಟಿಸಿತ್ತು. ಇದೀಗ ಆ ಚಿತ್ರವನ್ನು ಪ್ರೀತಂ ಗುಬ್ಬಿ ರಿಮೇಕ್ ಮಾಡುತ್ತಿದ್ದಾರೆ. ತಮಿಳು ಚಿತ್ರ ತನ್ನ ಹಾಡುಗಳಿಂದಲೂ ಸುದ್ದಿಯಾಗಿತ್ತು. ಕನ್ನಡದಲ್ಲಿ ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ಮಾಡಲಿದ್ದಾರೆ.. ಒಟ್ಟಾರೆಯಾಗಿ ಮತ್ತೊಂದು ಪ್ರೇಮಕತೆ ತೆರೆ ಮೇಲೆ ಬರಲು ಎಲ್ಲಾ ರೀತಿಯಲ್ಲೂ ಸಿದ್ದತೆಗಳನ್ನು ನಡೆಸುತ್ತಿದೆ.

Edited By

Manjula M

Reported By

Manjula M

Comments