ಮದುವೆ ವಾರ್ಷಿಕೋತ್ಸವದ ದಿನ ಪ್ರೆಗ್ನೆನ್ಸಿ ಗುಟ್ಟನ ಬಿಟ್ಟು ಕೊಡ್ತಾರಾ ವಿರುಷ್ಕಾ ದಂಪತಿ..!!

ಡಿಸೆಂಬರ್ 11 ಕ್ಕೆ ಅನುಷ್ಕಾ ಶರ್ಮಾ -ವಿರಾಟ್ ಕೊಹ್ಲಿ ಮದುವೆಯಾಗಿ ಒಂದು ವರ್ಷ ತುಂಬುತ್ತದೆ. ಮೊದಲನೇ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾರೆ ವಿರುಷ್ಕಾ ದಂಪತಿ.. ವಿವಾಹ ವಾರ್ಷಿಕೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.ಇದೆಲ್ಲದರ ನಡುವೆ ಅನುಷ್ಕಾ ಶರ್ಮಾ ಗರ್ಭಿಣಿ ಎನ್ನುವ ಸುದ್ದಿಯೂ ಕೂಡ ಹರಿದಾಡುತ್ತಿದೆ. ಮದುವೆಯಾದ ವರ್ಷಕ್ಕೆ ಸಿಹಿ ಸುದ್ಧಿ ಕೊಡುತ್ತಿದ್ದಾರೆ ಎಂದು ತಮಾಷೆಯಾಗಿ ಎಲ್ಲರೂ ಕಾಲೆಳೆಯುತ್ತಿದ್ದರು.
ಆದರೂ ಅನುಷ್ಕಾ ತುಟಿಕ್ ಪಿಟಿಕ್ ಎಂದಿರಲಿಲ್ಲ. ಇದೀಗ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಸ್ವತಹ ಅನುಷ್ಕಾರವರೆ ಮೌನ ಮುರಿದಿದ್ದಾರೆ. ಯಾವಾಗಲೂ ಜನ ಸುಮ್ಮನೆ ವದಂತಿಗಳನ್ನು ಹಬ್ಬಿಸುತ್ತಲೇ ಇರುತ್ತಾರೆ. ನಾನು ಪ್ರಗ್ನೆಂಟ್ ಎಂಬೆಲ್ಲಾ ವದಂತಿಗಳೆಲ್ಲಾ 'ಸಿಲ್ಲಿ' ಎಂದಿದ್ದಾರೆ. ಇಂತಹ ವಿಚಾರಗಳನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ತಿಂಗಳು ಕಳೆದಂತೆ ಗೊತ್ತಾಗುತ್ತದೆ. ಯಾರು ಏನೇ ವದಂತಿ ಹಬ್ಬಿಸಬಹುದು, ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಅಂದಿದ್ದಾರೆ
Comments