ಅಪ್ಪನ ಎದೆಯ ಮೇಲೆ ಪುಟ್ಟ ಮಗಳ ನಿದ್ರೆ..ಸಂತಸದಲ್ಲಿ ಅಜಯ್ ರಾವ್..!!
ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಹೆಣ್ಣು ಮಗುವಿಗೆ ತಂದೆಯಾಗಿರುವ ವಿಷಯ ಎಲ್ಲರಿಗೂ ಕೂಡ ತಿಳಿದೆ ಇದೆ.. ಇದೀಗ ತನ್ನ ಮಗಳೊಂದಿಗಿನ ಪ್ರತಿಯೊಂದು ಕ್ಷಣಗಳನ್ನು ಅಜಯ್ ರಾವ್ ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.ಕಳೆದ ಎರಡು ವಾರಗಳ ಹಿಂದೆಯಷ್ಟೆ ಅಜಯ್ ರಾವ್ ಮನೆಗೆ ಹೊಸ ಅಥಿತಿಯ ಆಗಮನವಾಗಿದೆ. ಡಿಸೆಂಬರ್ 2 ರಂದು ಮುದ್ದಾದ ಮಗುವಿಗೆ ಚೆರಿಷ್ಮಾ ಅಂತಾ ನಾಮಕರಣ ಮಾಡಿದ ಅಜಯ್ ದಂಪತಿ, ಪುಟ್ಟ ಮಗುವಿನ ತೊಟ್ಟಿಲು ತೂಗಿ ಸಂಭ್ರಮ ಪಡುತ್ತಿದ್ದಾರೆ..
ಅಜಯ್ ರಾವ್ ಹೊಸ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಮಗಳನ್ನು ಎದೆ ಮೇಲೆ ಮಲಗಿಸಿದ ಫೋಟೋ ತುಂಬಾ ಮುದ್ದಾಗಿದೆ. ಇದು ನನ್ನ ಚೆರ್ರಿ ಮಲಗುವ ರೀತಿ, ಅವಳನ್ನು ಬೆಡ್ ಮೇಲೆ ಮಲಗಿಸಿದರೆ ಅಳುತ್ತಾಳೆ. ಅವಳು ಅಪ್ಪನ ಮಗಳು ಎಂದಿರುವ ಅಜಯ್ ರಾವ್ ಮಗಳ ಜೊತೆಗೆ ಹೀಗೆ ಕಾಲ ಕಳೆಯುವಲ್ಲಿ ಸಿಗುವ ಅನುಭವ ನಿಜಕ್ಕೂ ಸ್ವರ್ಗದಂತೆ ಇರುತ್ತೆ ಎಂದು ನಾನು ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಅಜಯ್ ರಾವ್ ತಿಳಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಅಪ್ಪನನ್ನು ಕಂಡರೆ ತುಂಬಾ ಇಷ್ಟ ಅನ್ನೋದನ್ನ ಅಜಯ್ ರಾವ್ ಮಗಳು ಮತ್ತೊಮ್ಮೆ ಪ್ರೂ ಮಾಡಿದ್ದಾಳೆ.
Comments