ಮದುವೆಯಾಗಿ ಮಗುವಾದ್ರೂ ಈ ನಾಯಕಿಗೆ ಕೋಟಿ ಸಂಭಾವನೆಯಂತೆ..!!

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳಿಗೇನು ಕಡಿಮೆ ಇಲ್ಲ.. ಅದೇ ರೀತಿಯ ಸಾಲಿಗೆ ಸೇರುವ ಚಿತ್ರಗಳಲ್ಲಿ ದಮಯಂತಿ ಕೂಡ ಒಂದು.. ಸ್ಯಾಂಡಲ್ ವುಡ್ ನಟಿ ರಾಧಿಕಾ ಅವರು ಈ ಚಿತ್ರದಲ್ಲಿ ದಮಯಂತಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.. ತಮ್ಮ ಮುಂಬರುವ 'ದಮಯಂತಿ' ಚಿತ್ರಕ್ಕೆ ರಾಧಿಕ ತೆಗೆದುಕೊಂಡ ಸಂಭಾವನೆ ಕೇಳಿದರೆ ಶಾಕ್ ಆಗ್ತೀರಾ.
ಎಸ್... ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಬಹುಕೋಟಿ ಬಜೆಟ್ ಚಿತ್ರ 'ದಮಯಂತಿ' ಯಲ್ಲಿ ನಟಿ ರಾಧಿಕಾ ಅವರು ನಟಿಸುತ್ತಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಈಗಾಗಲೇ ರಿಲೀಸ್ ಆಗಿದೆ. ಆದರೆ ಇದು ನಾಯಕಿ ಪ್ರಧಾನ ಚಿತ್ರವಾದ್ದರಿಂದ ನಟಿ ರಾಧಿಕಾ ಚಿತ್ರಕ್ಕೆ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಈ ಮೂಲಕ ಅವರು ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರ ಲಿಸ್ಟ್‍ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಸ್ಯಾಂಡಲ್ ವುಡ್ ಮತ್ತೊಂದು ಒಳ್ಳೆಯ ಸಿನಿಮಾಗೆ ಸಾಕ್ಷಿಯಾಗಲಿದೆ.
Comments