ಚಂದನವನದ ದೂದ್ ಪೇಡ -ಆ್ಯಂಡಿ ಮದುವೆ ಡೇಟ್ ಫಿಕ್ಸ್..?

ಸಿನಿ ರಂಗದಲ್ಲಿ ಮದುವೆ ಹಬ್ಬವೇ ನಡೆಯುತ್ತಿದೆ. ಇದೀಗ ಸ್ಯಾಂಡಲ್ ವುಡ್ ದೂದ್ ಪೇಡಾ ದಿಗಂತ್ ಹಾಗೂ ಐಂದ್ರಿತಾ ರೇ ಡಿಸೆಂಬರ್ 12 ರಂದು ಸಪ್ತಪದಿ ತುಳಿಯುತ್ತಿದ್ದಾರೆ... ಈ ಜೋಡಿ ತುಂಬಾ ವರ್ಷದಿಂದ ಪ್ರೀತಿಸುತ್ತಿದ್ದರು. ಒಬ್ಬರನ್ನೊಬ್ಬರು ಪರಸ್ವರ ಪ್ರೀತಿಸುತ್ತಿದ್ದರು.. ಮದುವೆ ಯಾವಾಗ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಇದೀಗ ತೆರೆ ಎಳೆದಿದ್ದಾರೆ.
ಎಸ್… ದಿಗಂತ್ ಐಂದ್ರಿತಾ ರೈ ಅವರ ಮದುವೆಗೆ ದಿನಗಣನೆ ಆರಂಭವಾಗಿದ್ದು, ಡಿ.11 ಮತ್ತು 12 ರಂದು ಮದುವೆ ಸರಳವಾಗಿ ನಡೆಯಲಿದೆ. ಮದುವೆಗೆ ಸಿಂಪಲ್ ಇನ್ವಿಟೇಷನ್ ಕಾರ್ಡ್ ಮುದ್ರಿಸಿಲಾಗಿದೆ.. ಸದ್ಯ ಸಿಕ್ಕಿರುವ ಈ ಆಮಂತ್ರಣ ಪತ್ರಿಕೆಯನ್ನು ಆಪ್ತರು, ಕುಟುಂಬಸ್ಥರಿಗಷ್ಟೇ ನೀಡಲಾಗಿದ್ದು, ಡಿಸೆಂಬರ್ 16 ರಂದು ಸ್ಯಾಂಡಲ್ ವುಡ್ ಗೆಳೆಯರಿಗಾಗಿ ವಿಶೇಷ ಪಾರ್ಟಿ ಆಯೋಜಿಸಲಾಗಿದೆ ಎನ್ನಲಾಗಿದೆ.
Comments