ಚಾಲೆಂಜಿಂಗ್ ಸ್ಟಾರ್ ದರ್ಶನ್ 53 ನೇ ಚಿತ್ರದ ಟೈಟಲ್ ಅನೌನ್ಸ್’ಗೆ ಡೇಟ್ ಫಿಕ್ಸ್..!?
ಸ್ಯಾಂಡಲ್ ವುಡ್ ನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಈ ವರ್ಷದ ಕೊನೆಗೆ ಮತ್ತೊಂದು ಸಂಭ್ರಮ ವಿಷಯವನ್ನು ಹೇಳಲಿದ್ದಾರೆ... ಏಕೆಂದರೆ ದರ್ಶನ್ ಅಭಿನಯದ 53ನೇ ಚಿತ್ರದ ಟೈಟಲ್ ಇದೇ ಡಿ.25 ರಂದು ಅಂದರೆ ಕ್ರಿಸ್‍ಮಸ್ ದಿನದಂದು ಹೊರಬೀಳಲಿದೆ. ಅಷ್ಟೆ ಅಲ್ಲ, ಅಂದೇ ಈ ಚಿತ್ರದ ಮುಹೂರ್ತ ನೆರವೇರುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ,
ತರುಣ್ ಸುಧೀರ್ ನಿರ್ದೇಶನದ ಹೊಸ ಚಿತ್ರದಲ್ಲಿ ದರ್ಶನ್ ಅಭಿನಯಿಸಲಿರುವುದು ಅಭಿಮಾನಿಗಳೆಲ್ಲರಿಗೂ ಗೊತ್ತಿರುವ ವಿಷಯ.. ಈ ಸಿನಿಮಾ ದರ್ಶನ್ 53ನೇ ಚಿತ್ರವಾದ್ದರಿಂದ "ಡಿ53" ಎಂಬ ತಾತ್ಕಾಲಿಕ ಹೆಸರಿಟ್ಟುಕೊಂಡು ಎಲ್ಲಾ ರೀತಿಯ ತಯಾರಿಗಳನ್ನು ಮಾಡಲಾಗುತ್ತಿದೆ.. ಆದರೆ ಚಿತ್ರದ ಹೆಸರೇನು ಇರಬಹುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ಕ್ರಿಸ್ಮಸ್ ದಿನ ತೆರೆ ಬೀಳಲಿದೆ ಎಂದು ಹೇಳಲಾಗುತ್ತಿದೆ.
Comments