ಮಗು ಆದ್ರೂ ರಾಧಿಕಾಗೇ ಬೇಸರವಾಗಿದ್ಯಾಕೆ....?
ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ರಾಜಾಹುಲಿ ದಂಪತಿಗೆ ಹೆಣ್ಣು ಮಗುವಾಗಿದೆ. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಶುಭಸುದ್ದಿ ಸಿಕ್ಕಿದೆ. ರಾಧಿಕಾ ಪಂಡಿತ್ ಭಾನುವಾರವಷ್ಟೇ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ- ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈಗಾಗಲೇ ಚಿತ್ರರಂಗದ ಅನೇಕರು ಈ ದಂಪತಿಗೆ ಕಂಗ್ರಾಟ್ಸ್ ಹೇಳಿದ್ದಾರೆ. ಈ ನಡುವೆ ಯಶ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದು, ಅಭಿಮಾನಿಗಳು, ಸ್ನೇಹಿತರಿಂದ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.
ಕುಟುಂಬಸ್ಥರು ಭಾಗ್ಯಲಕ್ಷ್ಮಿ ಆಗಮನಕ್ಕೆ ಮನೆಯಲ್ಲಿ ಸಂಭ್ರಮ ಆಚರಿಸಿದ್ದಾರೆ. ಇನ್ನು ಅಭಿಮಾನಿಗಳನ್ನು ಕೇಳಬೇಕೆ.... ಕರ್ನಾಟಕಾದಾದ್ಯಂತ ಅಭಿಮಾನಿಗಳು ತಮ್ಮ ಸ್ಟಾರ್ಗೆ ಕ್ಯೂಟ್ ಕಿಡ್ ಆಗಿದ್ದರ ಫಲ ಸ್ವೀಟ್ ಹಂಚಿ ಸಂಭ್ರಮಿಸಿದ್ದಾರೆ. ಆದರೆ ಈ ನಡುವೆ ರಾಧಿಕಾ ಸ್ವಲ್ಪ ಬೇಜಾರಾದಂತಿದೆ. ರಾಧಿಕಾ ಗಂಡು ಮಗುವಾದರೆ ನನಗಿಷ್ಟ, ಅದು ಜೂನಿಯರ್ ರಾಮಾಚಾರಿ ಆಗಲಿದೆ ಎಂದು ಹೇಳುತ್ತಿದ್ದರು. ಆದರೆ ಯಶ್ ಅವರ ಆಸೆಯಂತೇ ಜೂನಿಯರ್ ಸಿಂಡ್ರೆಲಾ ಜನಿಸಿದ್ದಾಳೆ. ರಾಧಿಕಾಗೆ ಈ ಬಗ್ಗೆ ಬೇಸರವೇನೂ ಅಲ್ಲ. ಬದಲಾಗಿ. ನಾರ್ಮಲ್ ಡೆಲಿವರಿ ಆಗುತ್ತದೆ ಎಂದು ಭಾವಿಸಿದ್ದರು. ಆದರೆ ರಾಧಿಕಾ ಪಂಡಿತ್ಗೆ ಸಿಜೇರಿಯನ್ ಮಾಡಲಾಗಿದೆ. ಇದರಿಂದ ರಾಧಿಕಾ ಇನ್ನು ಸ್ವಲ್ಪ ದಿನಗಳ ಕಾಲ ಬೆಡ್ ರೆಸ್ಟ್ ಮಾಡಬೇಕಾಗುತ್ತದೆ. ಒಂದಷ್ಟು ದಿನ ನಾರ್ಮಲ್ ಆಗಿ ಓಡಾಡುವ ಆಗಿಲ್ಲ. ಇದರಿಂದ ಮನೆಗೆ ಭಾಗ್ಯಲಕ್ಷ್ಮಿ ಬಂದ್ರೂ ಸ್ವಲ್ಪ ಬೇಜಾರಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
Comments