ಇಂದು ಅಂಬರೀಶ್ ಪುಣ್ಯಸ್ಮರಣೆ ಹಿನ್ನಲೆ: ಕಂಠೀರವ ಸ್ಟುಡಿಯೋದಲ್ಲಿ ಪೂಜೆ
ಮಾಜಿ ಸಚಿವ, ನಟ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆ ಇಂದು ನಡೆಯಲಿದ್ದು, ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಅವರು ಈಗಾಗಲೇ ಕಂಠೀರವ ಸ್ಟುಡಿಯೋಗೆ ಬಂದಿದ್ದು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ..
ಆಗಲೇ ಕಂಠೀರವ ಸ್ಟುಡಿಯೋದಲ್ಲಿ ಪೂಜೆ ಸಲ್ಲಿಸಲಾಗುತ್ತಿದ್ದು, ನಂತರ ಪ್ಯಾಲೇಸ್ ರೋಡ್ ನಲ್ಲಿರುವ ಪ್ರೇಸ್ಟಿಜ್ ಅಪಾರ್ಟ್ ಮೆಂಟ್ ನಿವಾಸದಲ್ಲಿ ಪೂಜಾಕಾರ್ಯಕ್ರಮಗಳು ನಡೆಯಲಿದೆ. ಮನೆಯಲ್ಲಿ ನಡೆಯುವ ಕಾರ್ಯಕ್ಕೆ ಸಿನಿಮಾ ಗಣ್ಯರು ಹಾಗೂ ಆಪ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳಿಗಾಗಿ ಕಂಠೀರವ ಸ್ಟುಡಿಯೋ ಬಳಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, 15 ಕೌಂಟರ್ ಗಳಲ್ಲಿ ಊಟ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ಅಲ್ಲದೇ, ಅಭಿಮಾನಿಗಳಿಗೆ ಪೂಜೆ ನೋಡಲು ಅವಕಾಶ ಮಾಡಿಕೊಡಲಾಗಿದೆ. ಅಂಬರೀಶ್ ನಿಧನಕ್ಕೆ ಇಡೀ ರಾಜ್ಯವೆ ಸಂತಾಪವನ್ನು ಸೂಚಿಸಿದೆ.
Comments