ಮರಿಟೈಗರ್ ವಿನೋದ್ ಪ್ರಭಾಕರ್ @39… ಹ್ಯಾಪಿ ಬರ್ತ್ ಡೇ ವಿನೋದ್
ಸ್ಯಾಂಡಲ್ ವುಡ್ ನಲ್ಲಿ ಟೈಗರ್ ಅಂತಾನೇ ಪೇಮಸ್ ಆಗಿದ್ದ ಪ್ರಭಾಕರ್ ಮಗನಾದ ಮರಿಟೈಗರ್ ವಿನೋದ್ ಪ್ರಭಾಕರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿನೋದ್ ಪ್ರಭಾಕರ್ ಇಂದು 39 ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ವಿನೋದ್ ಪ್ರಭಾಕರ್ ಅವರು ಫೈಟರ್ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಫೈಟರ್ ಚಿತ್ರವನ್ನು ನೂತನ್ ಉಮೇಶ್ ಎಂಬುವರು ನಿರ್ದೇಶನ ಮಾಡುತ್ತಿದ್ದು, ಸದ್ಯದಲ್ಲೇ ಫೈಟರ್ ಸಿನಿಮ ತೆರೆ ಮೇಲೆ ಬರಲು ಸಜ್ಜಾಗಿದೆ . ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ತಾಯಿ ಪಾತ್ರದಲ್ಲಿ ನಾಗಮಂಡಲ ಚಿತ್ರದಲ್ಲಿ ಅಭಿನಯಿಸಿದ್ದ ವಿಜಯಲಕ್ಷ್ಮೀ ಅಭಿನಯಿಸುತ್ತಿದ್ದಾರೆ. ನೂತನ್ ಉಮೇಶ್ ಅವರು ವಿನೋದ್ ಪ್ರಭಾಕರ್ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ತಿಳಿಸಿದ್ದಾರೆ.
Comments