ಯಶ್+ರಾಧಿಕಾ = ಯಶಿಕಾ…!! ಹೆಸರು ಸೂಚಿಸಿದ್ದು ಯಾರು ಗೊತ್ತಾ….?

ಸ್ಯಾಂಡಲ್ ವುಡ್’ನಲ್ಲಿ ಕ್ಯೂಟ್ ಕಪಲ್ ಯಶ್- ರಾಧಿಕಾ ಅವರ ಮನೆಗೆ ಭಾಗ್ಯಲಕ್ಷ್ಮಿ ಬಂದಿದ್ದಾಳೆ. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದ್ದಾಗಿದೆ. ನಿನ್ನೆಯಷ್ಟೇ ರಾಧಿಕಾ ಪಂಡಿತ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯಶ್-ರಾದಿಕಾ ಅಭಿಮಾನಿಗಳು ತಮ್ಮ ಜೂನಿಯರ್ ಸ್ಟಾರ್’ಗೆ ಹೆಸರನ್ನು ಸೂಚಿಸುತ್ತಿದ್ದಾರೆ. ಭಾನುವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟ ಯಶ್ ತಂದೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹೆಸರಿನ ಸಲಹೆಯನ್ನು ನೀಡಿದ್ದಾರೆ.
ಹಿಂದೆಯೇ ಈ ಬಗ್ಗೆ ಅಭಿಮಾನಿಗಳು ಯಶ್ ಅವರನ್ನು ಮಗುವಿಗೆ ಹೆಸರು ಹೇಳಿ ಎಂದು ಪಟ್ಟು ಹಿಡಿದಿದ್ದರು. ತಾವು ಕೂಡ ಒಂದಷ್ಟು ಹೆಸರುಗಳನ್ನು ಹೇಳಿದ್ದರೂ ಕೂಡ. ಯಶ್ ಕೂಡ ಕೂಸು ಹುಡುವ ಮೊದಲೇ ಕುಲಾವಿ ಹೊಲಿಸೋದು ಬೇಡ ಎಂದು ಜಾರಿಕೊಂಡಿದ್ದರು. ಇದೀಗ ಅಭಿಮಾನಿಗಳು ಒಂದು ಮುದ್ದಾದ ಹೆಸರನ್ನು ಸೂಚಿಸಿದ್ದಾರೆ. ಬಹಳ ಕುತೂಹಲದಿಂದ ಕಾಯುತ್ತಿದ್ದ ಹೆಸರನ್ನು ಸೂಚಿಸಿದ್ದಾರೆ. ಅಭಿಮಾನಿಯೊಬ್ಬರು ನಟ ಯಶ್ ಅವರ ಮೊದಲ ಪದ ಮತ್ತು ರಾಧಿಕಾ ಅವರ ಕೊನೆಯ ಪದವನ್ನು ತೆಗೆದುಕೊಂಡು ಅವರ ಮಗಳಿಗೆ 'ಯಶಿಕಾ' ಎಂದು ನಾಮಕರಣ ಮಾಡಿ ಅಂತ ಕಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.
Comments