ಆಸ್ತಿ ತೆರಿಗೆ ಕಟ್ಟದ ಚಾಲೆಂಜಿಂಗ್ ಸ್ಟಾರ್ :ಬಿಬಿಎಂಪಿ ವಿಧಿಸಿದ ದಂಡವೆಷ್ಟು ಗೊತ್ತಾ..!?

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ 100 ರು. ದಂಡ ವಿಧಿಸಿದೆ ಎನ್ನಲಾಗಿದೆ. ನಟ ದರ್ಶನ್ ಅವರು ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯ ತೂಗುದೀಪ ನಿವಾಸದ 2017-18ನೇ ಸಾಲಿನ ಆಸ್ತಿ ತೆರಿಗೆ ಪಾವತಿಯನ್ನು ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ. ಆಸ್ತಿ ತೆರಿಗೆಯನ್ನು ಬಾಕಿ ಉಲಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ 100 ರು. ದಂಡ ವಿಧಿಸಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ 2017-18, 2018-19ನೇ ಸಾಲಿನ 12,024 ರು. ಆಸ್ತಿ ತೆರಿಗೆಯನ್ನು ನಿಗದಿತ ಸಮಯದಲ್ಲಿ ಕಟ್ಟಬೇಕಿತ್ತು. ಆದರೆ ದರ್ಶನ್ ತಡವಾಗಿ ತೆರಿಗೆಯನ್ನು ಪಾವತಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ 2164 ರು. ಬಡ್ಡಿ , 100 ರು. ದಂಡ ವಿಧಿಸಿ, ಒಟ್ಟು 14,889 ರು. ಪಾವತಿ ಮಾಡುವಂತೆ ಸೂಚನೆಯನ್ನು ನೀಡಿದೆ. ಅದೇ ರೀತಿಯಾಗಿ ಇನ್ನು ಇದೇ ಬಡಾವಣೆಯಲ್ಲಿರುವ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಲಿಕತ್ವದ ಬಾಪೂಜಿ ಎಜುಕೇಷನ್ ಟ್ರಸ್ಟ್ 2018-19ನೇ ಸಾಲಿನ 60,26,304 ಲಕ್ಷ ರು. ಆಸ್ತಿ ತೆರಿಗೆಯನ್ನು ಕಟ್ಟದೆ ಬಾಕಿ ಉಳಿಸಿಕೊಂಡಿರುವುದು ಕೂಡ ಈ ಸಮಯದಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
Comments