ಡಬ್ಬಿಂಗ್ ಹೋರಾಟಕ್ಕೂ ನನಗೂ ಇನ್ಮುಂದೆ ಯಾವುದೇ ರೀತಿಯ ಸಂಬಂಧವಿಲ್ಲ :- ಜಗ್ಗೇಶ್ ಟ್ವೀಟ್
ಬಹಳ ವರ್ಸ್ಯಾಂಷಗಳಿಂದಲೂ ಕೂಡ ಡಬ್ಬಿಂಗ್ ಹೋರಾಟ ನಡೆಯುತ್ತಲೆ ಇದೆ. ಇದೀಗ ಸ್ಯಾಂಡಲ್ ವುಡ್ ನ ನವರಸ ನಾಯಕ ಜಗ್ಗೇಶ್ ಅವರು ಇದೀಗ ಡಬ್ಬಿಂಗ್ ವಿರೋಧಿ ಹೋರಾಟ ಮಾಡಲ್ಲ ಎಂದು ಬಹಿರಂಗವಾಗಿ ತಿಳಿಸಿದ್ದಾರೆ, ಈ ಕುರಿತು ಟ್ವೀಟ್ ಮಾಡಿದ್ದು, ಡಬ್ಬಿಂಗ್ ಹೋರಾಟಕ್ಕೂ ನನಗೂ ಇನ್ನು ಮುಂದೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಇನ್ಮುಂದೆ ಡಬ್ಬಿಂಬ್ ಹೋರಾಟಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕನ್ನಡಿಗರಿಗೆ ಏನು ಇಷ್ಟವೋ ಅದನ್ನು ನೋಡಲು ಅವರು ಸರ್ವ ಸ್ವತಂತ್ರರಾಗಿದ್ದಾರೆ, ಅವರನ್ನು ತಡೆಯಲು ನಮಗೆ ಯಾವುದೆ ಹಕ್ಕು ಇಲ್ಲ ಹಾಗೂ ನನ್ನ ಹಿಂದಿನ ನಡವಳಿಕೆಗಳಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಇರಲಿ, ಇನ್ಮುಂದೆ ನಾನಾಯಿತು, ನನ್ನ ಕಲಾ ಕರ್ತವ್ಯವಾಯಿತು ಎಂದುಕೊಂಡು ಇರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Comments