ರಕ್ಷಿತ್ ಶೆಟ್ಟಿಯ 'ಅವನೇ ಶ್ರೀಮನ್ನಾರಾಯಣ' ಚಿತ್ರ ನೋಡುವ ತವಕದಲ್ಲಿದ್ದಾರಂತೆ ರಶ್ಮಿಕಾ ಮಂದಣ್ಣ..!?

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಲವ್ ಬ್ರೇಕ್ ಆದ ಮೇಲೆ ಅಷ್ಟಾಗಿ ಕಾಣಿಸಿಕೊಂಡಿಲ್ಲ.. ಇದೀಗ ಸ್ಯಾಂಡಲ್ ವುಡ್ ನ ನಟಿ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾವನ್ನು ನೋಡಬೇಕೆಂಬ ಕಾತುರವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಒಂದಾದ ಈ ಕ್ಯೂಟ್ ಕಪಲ್ ನಂತರ ಪ್ರೀತಿಸಿ ಎಂಗೇಜ್ ಮೆಂಟ್ ಕೂಡ ಮಾಡಿಕೊಂಡರು. ಆದರೆ ಕೆಲ ಕಾರಣಾಂತರಗಳಿಂದ ಇವರಿಬ್ಬರ ಸಂಬಂಧ ಮುರಿದು ಬಿತ್ತು.
ಆದರೆ ಇದೀಗ 'ಅವನೇ ಶ್ರೀಮನ್ನಾರಾಯಣ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದ ಸಚಿನ್ ರವಿಯರು ರಶ್ಮಿಕಾ ಮಂದಣ್ಣರವರ ಆತ್ಮೀಯ ಸ್ನೇಹಿತರಾಗಿದ್ದರಿಂದ ಸಚಿನ್ ರವಿರವರ ಹುಟ್ಟುಹಬ್ಬದ ಸಲುವಾಗಿ ರಶ್ಮಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸುವುದರ ಜೊತೆಗೆ ನಾನು 'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದೇನೆಂದು ಹಂಚಿಕೊಂಡಿದ್ದಾರೆ. ಇದೀಗ ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದ್ದು, ರಶ್ಮಿಕಾ ಮತ್ತು ರಕ್ಷಿತ್ ಮತ್ತೆ ಒಂದಾಗುತ್ತಾರ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.
Comments