ಮೀ ಟೂ ಆರೋಪ ಮಾಡಿ ಕ್ಷಮೆ ಕೇಳಿದ ನಟಿ ಸಂಜನಾ

ಹಾಲಿವುಡ್ ನಲ್ಲಿ ಪ್ರಾರಂಭವಾದ 'ಮೀ ಟೂ' ಅಭಿಯಾನ, ನಂತರ ಬಾಲಿವುಡ್ ಗೆ ಕಾಲಿಟ್ಟಿದ್ದು, ಇದೀಗ ಸ್ಯಾಂಡಲ್ ವುಡ್ ನಲ್ಲೂ ಕೂಡ ಅಲ್ಲೋಲ ಕಲ್ಲೋಲ ಉಂಟು ಮಾಡುತ್ತಿದೆ. ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪದ ಬೆನ್ನಲೆ ನಟಿ ಸಂಜನಾ ಕೂಡ ನಿರ್ದೇಶಕ ರವಿ ಶ್ರೀ ವತ್ಸ ಮೇಲೆ ಆರೋಪವನ್ನು ಹಾಕಿದ್ದರು..
ನಟಿ ಸಂಗೀತಾ ಭಟ್ ಚಿತ್ರರಂಗದಲ್ಲಿ ತಮಗಾದ ಕಿರುಕುಳದ ಕುರಿತು ಹೇಳಿಕೆ ನೀಡಿದ ಬಳಿಕ ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ್ದ ನಟಿ ಸಂಜನಾ, ತಮಗೂ 'ಮೀ ಟೂ' ಅನುಭವವಾಗಿದ್ದು, 'ಗಂಡ-ಹೆಂಡತಿ' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ರವಿ ಶ್ರೀವತ್ಸ ಕಿರುಕುಳ ನೀಡಿದ್ದರೆಂದು ಆರೋಪ ಮಾಡಿದ್ದರು.. ಇದು ಸಂಜನಾ ಹಾಗೂ ರವಿ ಶ್ರೀವತ್ಸ ಅವರ ನಡುವೆ ಹೆಚ್ಚಿನ ವಾಗ್ವಾದಕ್ಕೆ ಕಾರಣವಾಗಿತ್ತು.. ಆದರೆ ಇದೀಗ ಸಂಜನಾ ತಮ್ಮ ಆರೋಪದ ಕುರಿತು ನಿರ್ದೇಶಕ ರವಿ ಶ್ರೀವತ್ಸ ಅವರನ್ನು ಕ್ಷಮೆ ಕೇಳಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Comments