ವಿಜಯ್ ರಾಘವೇಂದ್ರ ಅಭಿನಯದ ಕಿಸ್ಮತ್ ಸಿನಿಮಾದ ಟ್ರೈಲರ್ ರಿಲೀಸ್..!
ಸ್ಯಾಂಡಲ್ ವುಡ್ ನಲ್ಲಿ ಬಾಲ ನಟನಾಗಿ ಗುರುತಿಸಿಕೊಂಡವರಲ್ಲಿ ವಿಜಯ್ ರಾಘವೇಂದ್ರ ಕೂಡ ಒಬ್ಬರು.. ಚಿನ್ನಾರಿ ಮುತ್ತಾ ಸಿನಿಮಾದಿಂದಲೇ ಸಾಕಷ್ಟು ಭರವಸೆಯನ್ನು ಮೂಡಿಸಿದರರು… ನಂತರ ನಾಯಕನಾಗಿ ಸ್ಯಾಂಡಲ್ ವುಡ್ನನಲ್ಲಿ ತನ್ನನ್ನ ತಾನು ಗುರುತಿಸಿಕೊಂಡರು.. ನಿನಗಾಗಿ, ಸೇವಂತಿ ಸೇವಂತಿ, ಪ್ರೇಮ ಖೈದಿ, ರೋಮಿಯೋ ಜೂಲಿಯೆಟ್ ಎನ್ನುವ ಹಿಟ್ ಸಿನಿಮಾಗಳನ್ನು ನೀಡಿದರು.. ಇದೀಗ ನಟ ವಿಜಯ್ ರಾಘವೇಂದ್ರ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿ ನಟಿಸಿರುವ ಕಿಸ್ಮತ್ ಚಿತ್ರ ಟ್ರೈಲರ್ ರಿಲೀಸ್ ಆಗಿದೆ.
ಕಿಸ್ಮತ್ ಚಿತ್ರದ ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಆಕ್ಷನ್, ಕಾಮಿಡಿ ಹಾಗೂ ಹಲವು ಕುತೂಹಲಕಾರಿ ಘಟನೆಗಳ ಸುತ್ತ ಕಥೆ ಸುತ್ತೋ ಝಲಕ್ ಈ ಟ್ರೈಲರ್’ನಲ್ಲಿದೆ.. ಇನ್ನು ಕಿಸ್ಮತ್ ಚಿತ್ರವು ಕಾಮಿಡಿ ಥ್ರಿಲ್ಲರ್ ಹಾರರ್ ನ ಸಿನಿಮಾ.. ಕಿಸ್ಮತ್ ಚಿತ್ರ ಮಲೆಯಾಳಂ ತಮಿಳಿನ ನೇರಂ ಚಿತ್ರದ ರಿಮೇಕ್ ಆಗಿದ್ದು ಚಿತ್ರಕ್ಕೆ ರಾಜೇಶ್ ಮುರುಗೇಶ್ ಸಂಗೀತ ನಿರ್ದೇಶನವಿದೆ. ರಾಜೇಶ್ ಯಾದವ್ ಅವರ ಛಾಯಗ್ರಹಣವಿದೆ. ವಿಜಯರಾಘವೇಂದ್ರ, ಸುಂದರ್ ರಾಜ್, ನವೀನ್ ಕೃಷ್ಣ, ದಿಲೀಪ್ ರಾಜ್, ನಂದ, ತಬಲನಾಣಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
Comments