ಕೆಜಿಎಫ್ ಸಿನಿಮಾದ ಛಾಯಾಗ್ರಾಹಕ ಭುವನ್ ಗೌಡನಿಗೆ ಸಖತ್ ಡಿಮ್ಯಾಂಡ್
ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರವಾದ ಕೆಜಿಎಫ್ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಯಶ್ ಅಭಿಮಾನಿಗಳಿಗೆ ದೀಪಾವಳಿಗೆ ಬಂಪರ್ ಗಿಫ್ಟ್ ಎಂಬಂತೆ ಕೆಜಿಎಫ್ ಟ್ರೈಲರ್ ರಿಲೀಸ್ ಆಗಿದೆ. ಕೆಜಿಎಫ್ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ ... ಟ್ರೈಲರ್ ನೋಡಿಯೋ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಸಿನಿಮಾದಲ್ಲಿನ ರಾಕಿಂಗ್ ಸ್ಟಾರ್ ಯಶ್ ಅವರ ಮಾಸ್ ಲುಕ್ ಗೆ ಸಿನಿಮಾ ರಂಗವೇ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದೆ.ಈಗಾಗಲೇ ಕೆಜಿಎಫ್ ಟ್ರೇಲರ್ ಬಿಡುಗಡೆಯಾಗಿ ದೇಶಾದ್ಯಂತ ಭಾರೀ ಹವಾ ಕ್ರಿಯೆಟ್ ಮಾಡಿದೆ.. ಮಿಲಿಯನ್ ಗಿಂತಲೂ ಅಧಿಕ ಮಂದಿ ಟ್ರೇಲರ್ ವೀಕ್ಷಣೆ ಮಾಡಿದ್ದಾರೆ...
ಇದೀಗ ಕೆಜಿಎಫ್ ಚಿತ್ರದ ಛಾಯಾಗ್ರಾಹಕನಿಗೂ ಸಖತ್ ಡಿಮ್ಯಾಂಡ್ ಕ್ರಿಯೆಟ್ ಆಗಿದೆಯಂತೆ..ಸಿನಿಮಾ ನಿರ್ಮಾಣದ ಗುಣಮಟ್ಟ ಹಾಗೂ ನಿರ್ದೇಶನದ ಬಗ್ಗೆ ಎಲ್ಲ ಕಡೆಯಲ್ಲೂ ಕೂಡ ಮಾತನಾಡುತ್ತಿದ್ದಾರಂತೆ..ಜೊತೆಗೆ ಚಿತ್ರದ ಛಾಯಾಗ್ರಹಣ ಸಂಬಂಧ ಛಾಯಾಗ್ರಾಹಕ ಭುವನ್ ಗೌಡ ಬಗ್ಗೆ ಎಲ್ಲೆಡೆ ಹೊಗಳಿಕೆಯ ಪ್ರಶಂಸೆಗಳು ಕೇಳಿ ಬರುತ್ತಿವೆ, ದಕ್ಷಿಣ ಭಾರತ ಹಾಗೂ ಬಾಲಿವುಡ್ ಸಿನಿಮಾ ನಿರ್ಮಾಪಕರಿಂದಲೂ ಕೂಡ ಭುವನ್ ಗೆ ನಿರಂತರ ಕರೆ ಬರುತ್ತಿವೆಯಂತೆ.., ಆದರೆ ಕೆಜಿಎಫ್ ಸಿನಿಮಾ ಬಿಡುಗಡೆ ಆಗುವವರೆಗೂ ಕಾಯಲು ಭುವನ್ ನಿರ್ಧಾರ ಮಾಡಿದ್ದು ಸದ್ಯಕ್ಕೆ ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವುದಿಲ್ಲ ಎಂದು ಭುವನ್ ಗೌಡ ತಿಳಿಸಿದ್ದಾರೆ.
Comments